Mysore
35
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ

ಮೈಸೂರು : ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲೂಕಿನ ಚನ್ನಗುಂಡಿ ಗ್ರಾಮದಲ್ಲಿ ನಡೆದಿದೆ.

ಮಹೇಂದ್ರ (35) ಮೃತ ದುರ್ದೈವಿ. ಕಟ್ಟಿಗೆ ತರುವ ಸಲುವಾಗಿ ಗ್ರಾಮದಂಚಿನಲ್ಲಿರುವ ಜಮೀನಿಗೆ ತೆರಳಿದ್ದ ವೇಳೆ ಒಂಟಿ ಸಲಗವೊಂದು ಮಹೇಂದ್ರ ಅವರ ಮೇಲೆ ಹಠಾತ್‌ ದಾಳಿನಡೆಸಿದೆ. ಆನೆಯ ತುಳಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಮಹೇಂದ್ರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಈ ಸಂಬಂಧ ಸರಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!