Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಗ್ರಾಮಕ್ಕೆ ನುಗ್ಗಿ ಆತಂಕ ಮೂಡಿಸಿದ ಒಂಟಿ ಸಲಗ

ಎಚ್.ಡಿ.ಕೋಟೆ: ಒಂಟಿ ಸಲಗವೊಂದು ಇಂದು ಮುಂಜಾನೆ ಗ್ರಾಮಕ್ಕೆ ನುಗಿ ದಾಂದಲೆ ಮಾಡಿರುವ ಘಟನೆ ತಾಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಳಿಗ್ಗೆ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಗಾಬರಿಗೊಂಡರು. ಆನೆಯನ್ನು ಗ್ರಾಮದಿಂದ ಹೊರಗೆ ಕಳುಹಿಸಲು ಎಷ್ಟೇ ಪ್ರುಂತ್ನ ಪಟ್ಟರೂ ಕಾಡಾನೆ ಆ ರಸ್ತೆಯಿಂದ ಈ ರಸ್ತೆಗೆ, ಒಂದು ಹಿತ್ತಲಿನಿಂದ ಮತ್ತೊಂದು ಹಿತ್ತಲಿಗೆ ಓಡಾಡುತ್ತಾ ಬೆಳಿಗ್ಗೆ ೭ ಗಂಟೆವರೆಗೆ ಗ್ರಾಮದ ಪ್ರತಿಯೊಂದು ಬೀದಿಗಳಲ್ಲೂ ಓಡಾಡಿ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಠಿ ಮಾಡಿತ್ತು.

ಈ ವೇಳೆ ಪ್ರಭು ಮತ್ತು ನಟೇಶ್ ಎಂಬವರ ಮನೆ ಪಕ್ಕದಲ್ಲಿ ನಿಲ್ಲಿಸಿದ ಬೈಕ್ ಅನ್ನು ಆನೆ ಜಖಂಗೊಳಿಸಿದೆ. ಗ್ರಾಮದ ನಿವಾಸಿಗಳು ಸಂಗ್ರಹಿಸಿದ್ದ ಹುಲ್ಲಿನ ಮೆದೆಯನ್ನು, ಸೌದೆಗಳನ್ನು ಚೆಲ್ಲಾಪಿಲ್ಲಿ ಮಾಡಿದೆ.

ಬಳಿಕ ಕಾಡಾನೆ ಗ್ರಾಮಕ್ಕೆ ನುಗ್ಗಿರುವ ವಿಚಾರ ಅರಣ್ಯ ಇಲಾಖೆಯವರಿಗೆ ತಿಳಿದು, ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಜೊತೆಗೂಡಿ ಸಮೀಪದ ವೀರನಹೊಸಳ್ಳಿ ಕಾಡಿನ ಪ್ರದೇಶಕ್ಕೆ ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Tags:
error: Content is protected !!