ಮೈಸೂರು : ಕಳೆದ 7 ದಿನದಿಂದ ರಂಗಾಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ನೀಡಿದ್ದ 17ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಭಾನುವಾರ ವರ್ಣರಂಜಿತ ತೆರೆ ಬಿದ್ದಿತು.
ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ಪ್ರಯುಕ್ತ ’ಬಹುರೂಪಿ’ ಬೆಳ್ಳಿ ಹಬ್ಬದ ಅಂಗವಾಗಿ ಅಂಬೇಡ್ಕರ್ ಅವರ ಕುರಿತ ನಾಟಕಗಳು ಮತ್ತು ವಿಚಾರ ಸಂಕಿರಣಗಳು ಪ್ರಮುಖವಾಗಿ ನಡೆದವು. ಏಳು ದಿನಗಳಿಂದ ನಾಟಕ, ಸಿನಿಮಾ, ಸಾಕ್ಷ್ಯಚಿತ್ರ, ಜಾನಪದ ಕಾರ್ಯಕ್ರಮ, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನ, ಭಿತ್ತಿ ಚಿತ್ರ ಪ್ರದರ್ಶನ.. ಹೀಗೆ ನಾನಾ ಸಾಂಸ್ಕ ತಿಕ ಕಾರ‍್ಯಕ್ರಮಗಳನ್ನು ರಂಗಾಸಕ್ತರು ಸವಿದರು.
ಕೊನೆಯ ದಿನವಾದ ಭಾನುವಾರ ಒಂದೇ ಕುಟುಂಬದ 55 ಕಲಾವಿದರು ಅಭಿನಯಿಸಿದ್ದ ’ಭಕ್ತಪ್ರಹ್ಲಾದ’ ತೆಲುಗು ನಾಟಕ ಹಾಗೂ ಡಾ.ರಾಜಕುಮಾರ್ ಮತ್ತು ಭಾರತಿ ಅಭಿನಯದ ’ದೂರದ ಬೆಟ್ಟ’ ಸಿನಿಮಾ ಪ್ರಮುಖ ಆಕರ್ಷಣೆಯಾಗಿತ್ತು.




