Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ದೀಪಾಲಂಕಾರಕ್ಕೆ 5.5 ಕೋಟಿ ರೂ. ವೆಚ್ಚ: ಅಂದಾಜಿಗಿಂತ 1 ಕೋಟಿ ರೂ. ಹೆಚ್ಚು ಹೊರೆ

ಮೈಸೂರು: ಈ ಬಾರಿಯ ದಸರಾ ದೀಪಾಲಂಕಾರಕ್ಕೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದರಿಂದ ಸಾರ್ವಜನಿಕರ ಕೋರಿಕೆಯ ಮೇರೆಗೆ ಸೆಸ್ಕ್‌ ಅಧಿಕಾರಿಗಳು ದೀಪಾಲಂಕಾರವನ್ನು ವಿಸ್ತರಿಸಿದ್ದರು. ದಸರಾ ಉದ್ಘಾಟನೆಯಾದ ಸೆ.26ರಿಂದ ವಿಜಯದಶಮಿ ದಿನವಾದ ಅ.5ರವರೆಗೆ ಮೊದಲು ನಿಗದಿಯಾಗಿತ್ತು. ನಂತರ ಕೋರಿಗೆ ಮೇರೆಗೆ ಅ.10ರವರೆಗೆ ವಿಸ್ತರಿಸಲಾಯಿತು. ಬೇಡಿಕೆ ಹೆಚ್ಚಿದಾಗ ಇನ್ನೂ ಎರಡು ದಿನ (ಅ.12)ದೀಪಾಲಂಕಾರವನ್ನು ವಿಸ್ತರಿಸಿದ್ದರು. ಇದರಿಂದ 15 ದಿನಗಳಿಗೆ ಅಂತ್ಯಗೊಳ್ಳಬೇಕಿದ್ದ ದೀಪಾಲಂಕಾರ 17 ದಿನಗಳ ಕಾಲ ನಡೆಸುವ ಮೂಲಕ ಸಾರ್ವಜನಿಕರ ಮನಸೂರೆಗೊಳ್ಳುವ ಪ್ರಯತ್ನವನ್ನು ಸೆಸ್ಕ್‌ ಮಾಡಿತ್ತು.

ದಸರಾ ಮಹೋತ್ಸವದ ಪ್ರಯುಕ್ತ ಮೈಸೂರು ನಗರವನ್ನು ವಿದ್ಯುತ್‌ ದೀಪಗಳಿಂದ ಝಗಮಗಿಸುವಂತೆ ಮಾಡಿದ ಸೆಸ್ಕ್‌ಗೆ  ಬರೋಬ್ಬರಿ 5.5 ಕೋಟಿ ರೂ. ವೆಚ್ಚವಾಗಿದೆ. 4.5 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸೆಸ್ಕ್‌ಗೆ ಮತ್ತೆ 1 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಅವಧಿ ವಿಸ್ತರಣೆಯೊಂದಿಗೆ ಹೆಚ್ಚು ದಿನಗಳ ಕಾಲ ದೀಪಾಲಂಕಾರದ ವ್ಯವಸ್ಥೆ ಇದ್ದ ಪರಿಣಾಮ 2.3 ಲಕ್ಷ ಕಿಲೋವ್ಯಾಟ್‌ ವಿದ್ಯುತ್‌ ಬಳಕೆಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ