Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬೈಲುಕುಪ್ಪೆ ಟಿಬೆಟ್ ಕ್ಯಾಂಪ್‌ನಲ್ಲಿ 29 ಕೆ.ಜಿ ಗಾಂಜಾ ವಶ: ಐವರ ಬಂಧನ

ಪಿರಿಯಾಪಟ್ಟಣ : ಇಂದು ಮುಂಜಾನೆ ಬೈಲುಕುಪ್ಪೆ ಒಂದನೇ ಟಿಬೆಟನ್ ಕ್ಯಾಂಪ್ ಆವರಣದಲ್ಲಿ ಪೊಲೀಸರು ದಾಳಿ ನಡೆಸಿ 29 ಕೆ.ಜಿ ಗಾಂಜಾ ಹಾಗೂ ಒಂದು ಕಾರನ್ನ ವಶಪಡಿಸಿಕೊಂಡು ಐದು ಆರೋಪಿಗಳನ್ನ ಬಂಧಿಸಿದ್ದಾರೆ.

ಇಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಂದಿರುವ ಕೇರಳ ರಾಜ್ಯದ ವಾಹನ ನೋಂದಣಿ ಸಂಖ್ಯೆ ಕೆ ಎಲ್ 58 ಬಿ 2983 ಸಿಪ್ಟ್ ಕಾರಿನಲ್ಲಿದ್ದ 29 ಕೆ.ಜಿ. ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿರುವುದಾಗಿ ಮೈಸೂರು ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕಾರ್ ತಿಳಿಸಿದ್ದಾರೆ. ಬೈಲುಕುಪ್ಪೆ ಪೊಲೀಸ್ ಠಾಣೆಯ ಪೊಲೀಸ್ ಮೈದಾನದಲ್ಲಿ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಹಾಗೂ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ. ಒಡಿಸ್ಸಾ ರಾಜ್ಯದ ಬಿಕ್ರಂ ನಾಯಕ್, ಕುಶಾಲನಗರದ ನಯನ್ ದೀಪು , ಮಡಿಕೇರಿ ತಾಲೂಕು ಕಡಕದಾಳು ಗ್ರಾಮದ ಜಂಶೀರ್ , ಪಿರಿಯಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ಅನಿಲ್ ಕುಮಾರ್, ಕೊಪ್ಪ ಗುಡ್ಡನಹಳ್ಳಿ ಗ್ರಾಮದ ಭರತ್ ಕುಮಾರ್ ರವರನ್ನ ಬಂಧಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಹುಣಸೂರು ಡಿವೈಎಸ್ಪಿ ಮಹೇಶ್, ಬೈಲುಕೊಪ್ಪೆ ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಐ ಅಜಯ್ ಕುಮಾರ್ ಹಾಜರಿದ್ದರು.
ಕಾರ್ಯಾಚರಣೆಯಲ್ಲಿ ಬೈಲುಕೊಪ್ಪ ಪೊಲೀಸ್ ಠಾಣೆಯ, ಪಿಎಸ್ಐ ಅಜಯ್ ಕುಮಾರ್ , ಅಪರಾಧ ವಿಭಾಗದ ಪಿಎಸ್ಐ ಮಾಲಿಂಗಯ್ಯ, ಸಿಬ್ಬಂದಿಗಳಾದ ಅಜಯ್ ಕುಮಾರ್, ಚೇತನ್ ಕುಮಾರ್,ಮುದ್ದುರಾಜ್, ಕುಮಾರಸ್ವಾಮಿ, ರವಿ, ವೀರೇಶ್ ಕೆ.ಹೆಮಹದೇವಪ್ಪ, ರವಿ ಕುಮಾರ್, ಸುರೇಶ್, ರಾಜೇಶ್ , ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ