ನಂಜನಗೂಡು: ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಇಂದು ( ಮೇ 15 ) ಹುಂಡಿ ಎಣಿಕೆ ನಡೆದಿದ್ದು, 1.72 ಕೋಟಿ ರೂಪಾಯಿ ಸಂಗ್ರಹವಾಗಿದೆ.
ದೇವಸ್ಥಾನದ ದಾಸೋಹ ಭವನದಲ್ಲಿ ಒಟ್ಟು 35 ಹುಂಡಿಗಳ ಎಣಿಕೆ ನಡೆದಿದ್ದು, 1,72,85,296 ರೂಪಾಯಿಗಳು, 33 ವಿದೇಶಿ ಕರೆನ್ಸಿ ಹುಂಡಿಯಲ್ಲಿ ದೊರಕಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಮಾಹಿತಿ ನೀಡಿದರು. ಹಣದ ಜೊತೆಗೆ 92 ಗ್ರಾಂ 50 ಮಿಲಿ ಗ್ರಾಂ ಚಿನ್ನ ಹಾಗೂ 3 ಕೆಜಿ 500 ಗ್ರಾಂ ಬೆಳ್ಳಿಯೂ ಸಹ ಸಂಗ್ರಹವಾಗಿದೆ.





