ಮೈಸೂರು : ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರೋಣ ಎಂದು ಮಾಜಿ ಶಾಸಕ ಎಸ್.ಎ.ರಾಮದಾಸ್ ತಿಳಿಸದ್ದಾರೆ.
ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ವಿಚಾರವಾಗಿ ಸೃಷ್ಠಿಯಾಗಿರುವ ಗೊದಲಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭ್ಯರ್ಥಿಗಳ ಪಟ್ಟಿ ಇನ್ನು ಫೈನಲ್ ಆಗಿಲ್ಲ ಹೀಗಾಗಿ ಯಾರಿಗೂ ಗೊಂದಲ ಬೇಡ ಎಂದು ಮನವಿ ಮಾಡಿದರು.
ನಮ್ಮ ಪಕ್ಷ ನಡೆದುಕೊಂಡು ಬಂದಿರುವ ರೀತಿ ಎಲ್ಲರಿಗೂ ಗೊತ್ತು. ನಾಲ್ಕು ಬಾರಿ ಶಾಸಕನಾಗಿದ್ದರು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದ ಶ್ರೀವತ್ಸ ಅವರಿಗೆ ಟಿಕೆಟ್ ನೀಡಿದಾಗ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಪಕ್ಷದವರಿಗೆ ಹೇಳಿದ್ದೆ.
ನನಗೆ ಟಿಕೆಟ್ ಕೈತಪ್ಪಿದಾಗ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಮನೆಗೆ ಬಂದಿದ್ದರು. ಬಳಿಕ ನನ್ನ ಬೆಂಬಲಿಗರೊಂದಿಗೆ ಚರ್ಚೆ ಮಾಡಿ ಪಕ್ದಲ್ಲೇ ಇರುವುದಾಗಿ ಅಲ್ಲೇ ಅನೌಂಸ್ ಮಾಡಿದೆ.
ಆಗಲೂ ಪ್ಬಿರತಾಪ್ಜೆ ಸಿಂಹ ಒಂದು ಮಾತು ಹೇಳಿದ್ಪಿದರು. ರಾಮದಾಸ್ ಅವರಿಗೆ ಪಕ್ಷ ತಾಯಿ ಸ್ಥಾನ. ಅವರು ಇಲ್ಲೇ ಇರುತ್ತಾರೆ ಎಂಬ ನಂಬಿಕೆಯ ಮಾತುಗಳನ್ನು ಆಡಿದ್ದರು. ಸಂದರ್ಭ ಎದುರಾದರೇ ಅವರೂ ಹಾಗೆಯೇ ನಡೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದರು.
ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಿದರೆ ಹಿಂದಿನ ಎರಡು ಬಾರಿಗಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ನಂಬಿಕೆಯನ್ನು ವ್ಯಕ್ತಪಡಿಸಿದರು.
ಎಂದೆಂದಿಗೂ ಮಹರಾಜರ ಬಗ್ಗೆ ಗೌರವವಿದೆ : ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೈಸೂರು ಮಹಾರಾಜರ ಕೊಡುಗೆಯ ಬಗ್ಗೆ ಮಾತನಾಡಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ ನಾವೆಲ್ಲರೂ ಕೂಡ ರಾಜರು ಕೊಟ್ಟಿರುವ ಕೊಡುಗೆಗೆ ಎಂದೆಂದಿಗೂ ರುಣಿಯಾಗಿಬೇಕು. ತಮ್ಮ ರಾಜ್ಯದ ಬಗ್ಗೆ ಹಿಂದಿನ ಮಹಾರಾಜರು ದೂರದೃಷ್ಠಿ ಇಟ್ಟು ಮಾಡಿರುವ ಕೆಲಸ ಒಂದಾ ಎರಡಾ ! ಸಾಕಷ್ಟಿವೆ ಎಂದರು.