ಮೈಸೂರು: ಬೆಳಗಾವಿ ಜನರಿಗೆ ಸಿಹಿಸುದ್ದಿ ಸಿಕ್ಕಿದೆ. ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ಸೆಪ್ಟೆಂಬರ್ 26 ರಿಂದ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ.
ಈ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, MYS-DWR-MYS ರೈಲು ಇನ್ಮುಂದೆ MYS-BGM-MYS ಎಕ್ಸ್‌ಪ್ರೆಸ್ ರೈಲಾಗಿ ವಿಸ್ತರಿಸಲಾಗಿದೆ. ಮೈಸೂರಿನಿಂದ ರಾತ್ರಿ 10-30 ಕ್ಕೆ ಹೊರಡುವ 17301 ರೈಲು, ಬೆಳಗಾವಿಗೆ ಬೆಳಗ್ಗೆ 10-45 ಕ್ಕೆ ತಲುಪಲಿದೆ. ಇನ್ನು ಬೆಳಗಾವಿಯಿಂದ ಹೊರಡುವ 17302 ರೈಲು ರಾತ್ರಿ 8 ಗಂಟೆಗೆ ಮೈಸೂರು ತಲುಪಲಿದೆ.