Mysore
14
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮೈಸೂರು : ಸೆ.16 ರಂದು ಸಿರಿ ವಾನಳ್ಳಿ ಅವರಿಂದ ಏಕವ್ಯಕ್ತಿ ನಾಟಕ ಪ್ರದರ್ಶನ

ಮೈಸೂರು: ಮೈಸೂರು ಸೆಂಟರ್ ಫಾರ್ ಕಲ್ಚರ್ ಕಮ್ಯೂನಿಕೇಷನ್ ಅಂಡ್ ಕ್ರಿಯೇಟಿವಿಟಿ ಸಂಸ್ಥೆಯ( ಫೋರ್ ಸಿ) ವತಿಯಿಂದ ಸೆ.16 ರಂದು ಸಂಜೆ 7 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಯುವ ಪ್ರತಿಭೆ ಸಿರಿ ವಾನಳ್ಳಿ ಅವರಿಂದ ‘ಆನಂದಭಾವಿನಿ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಯುವ ಪ್ರತಿಭೆ ಸಿರಿ ವಾನಳ್ಳಿ
ಯುವ ಪ್ರತಿಭೆ ಸಿರಿ ವಾನಳ್ಳಿ

ಸುಮಾರು 90 ನಿಮಿಷವಿರುವ ಈ ನಾಟಕದ ಮೂಲ ಪಠ್ಯವನ್ನು ಸಾವಿತ್ರಿ ಅವರು ರಚಿಸಿದ್ದಾರೆ. ಈ ನಾಟಕವನ್ನು ಮರಾಠಿ ಮೂಲದಲ್ಲಿ ಪುರುಷೋತ್ತಮ್ ಶಿವರಾಮ್ ರೇಗೆ ರಚಿಸಿದ್ದು, ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಭಾಷಾಂತರಿಸಿದ್ದಾರೆ. ರಂಗರೂಪಕ್ಕೆ ಸುಧಾ ಆಡುಕಳ ತಂದಿದ್ದು, ಸಂಗೀತ ಅನುಷ್ ಶೆಟ್ಟಿ, ಮುನ್ನ, ನಿರ್ದೇಶನ ಡಾ.ಶ್ರೀಪಾದ ಭಟ್ ಮಾಡಿದ್ದಾರೆ ಎಂದು ಫೋರ್ ಸಿ ಸಂಸ್ಥೆ ಕಾರ್ಯದರ್ಶಿ ವತ್ಸ ಶರ್ಮ ತಿಳಿಸಿದ್ದಾರೆ. ಮಾಹಿತಿಗಾಗಿ 7019240128 ಸಂಪರ್ಕಿಸಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!