ಮೈಸೂರು : ಗದಗಿನಲ್ಲಿ ನಡೆದ 2022-23 ನೇ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 55 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿರುವ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಎಸ್.ತರುಣ್ ಗೌಡ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಗೌರವ ಕಾರ್ಯದರ್ಶಿ ಕೆ.ಎನ್.ಪಂಚಾಕ್ಷರ ಸ್ವಾಮಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಪರಶಿವಮೂರ್ತಿ ಹಾಜರಿದ್ದರು. ಇವರು ಮೈಸೂರಿನ ಕೆ.ಜಿ.ಕೊಪ್ಪಲು ಜಯನಗರ ನಿವಾಸಿ ವಿದ್ಯಾ ಮತ್ತು ಸ್ವಾಮಿಗೌಡ ದಂಪತಿಯ ಪುತ್ರ, ಕುಸ್ತಿ ತರಬೇತುದಾರ ಎಲ್.ಮಂಜಪ್ಪ ಅವರ ಶಿಷ್ಯ.