ಮೈಸೂರು : ತಾಲ್ಲೂಕಿನ ಲಿಂಗದೇವರ ಕೊಪ್ಪಲು ಗ್ರಾಮದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ದತ್ತೋ ಪಂತ್ ಥೇಗಂಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನಿರ್ದೇಶನಾಲಯದ ಸಹಯೋಗದಲ್ಲಿ ಒಂದು ದಿನದ ಅಸಂಘಟಿತ ಕಾರ್ಮಿಕರ ಮಾಹಿತಿ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ್, ಕಾರ್ಮಿಕ ಇಲಾಖೆಯ ಸತೀಶ್ ಕುಮಾರ್, ಆಪ್ತ ಸಮಾಲೋಚಕರಾದ ಗೋಪಾಲ್, ನಾಗೇಂದ್ರ ಪ್ರಸಾದ್, ಸ್ವರಾಜ್, ಅಂಗನವಾಡಿ ಮೇಲ್ವಿಚಾರಕಿ ಸುನಂದ, ಶಿಕ್ಷಕಿ ಗಿರಿಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ಭಾಗವಹಿಸಿದ್ದ ೧೦೦ ಜನ ಶಿಬಿರಾರ್ಥಿಗಳಿಗೆ ಕಾರ್ಮಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.