ಅಸೋಸಿಯೇಷನ್ ಆಫ್ ಫಿಜಿಷಿಯನ್ಸ್ ಆಫ್ ಇಂಡಿಯಾದಿಂದ ಕಾರ್ಯಕ್ರಮ
ಮೈಸೂರು: ಮಧುಮೇಹ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಸೋಸಿಯೇಷನ್ ಆಫ್ ಫಿಜಿಷಿಯನ್ಸ್ ಆಫ್ ಇಂಡಿಯಾ ವತಿಯಿಂದ ವಾಕಾಥಾನ್ ಹಮ್ಮಿಕೊಳ್ಳಲಾಗಿತ್ತು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ವಾಕಥಾನ್‌ಗೆ ಚಾಲನೆ ನೀಡಿದ ಡಾ.ಸಿ.ಡಿ.ಶ್ರೀನಿವಾಸ್ ನೀಡಿದರು.
ಈ ಸಂದರ್ಭದಲ್ಲಿ ಫಿಜಿಷಿಯನ್ಸ್ ಆಫ್ ಇಂಡಿಯಾ ಸಂಘದ ಅಧ್ಯಕ್ಷ ಡಾ.ಎಂ.ಎಂ.ಬಸವರಾಜು, ಉಪಾಧ್ಯಕ್ಷ ಎಚ್.ಜಿ.ಅಶೋಕ್, ಕಾರ್ಯದರ್ಶಿ ವೈ.ಎಸ್.ರವಿಕುಮಾರ್, ಡಾ.ಸುನಿತಾ, ಡಾ.ವಾಮದೇವ್, ಡಾ.ಕೃಷ್ಣಮೂರ್ತಿ, ಡಾ.ಲಕ್ಷ್ಮೀಗೌಡ, ಡಾ.ಭಾನುಕುಮಾರ್ ಮುಂತಾದವರು ಹಾಜರಿದ್ದರು.