Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಹುಲ್‌ ಗಾಂಧಿ ಅವರು ಯಾವ ಯಾವ ಕ್ಷೇತ್ರಗಳಿಗೆ ಭೇಟಿ ಮಾಡಿದ್ದಾರೆ ಅಲ್ಲೆಲ್ಲಾ ಬಿಜೆಪಿಯ ಕಮಲ ಅರಳಿದೆ : ಸಿಎಂ ಬೊಮ್ಮಾಯಿ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ತಿಳಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿ ಅವರು ದಸರಾ ಹಬ್ಬಕ್ಕೆ ನಮ್ಮದೆ ಆದಂತಹ ಒಂದು ಪರಂಪರೆ ಇದೆ. ದಸರಾ ಒಂದು ರೀತಿಯಲ್ಲಿ ನಾಡ ಹಬ್ಬವೂ ಕೂಡ ಹೌದು,ಜನರು ಸಂಭ್ರಮಿಸುವಂತಹ ಹಬ್ಬವಾಗಿದೆ. ಕಾಂಗ್ರೆಸ್‌ ನವರು ಮಾಡುತ್ತಿರುವ ಪೇ ಸಿಎಂ ಅಭಿಯಾನದ ಬಗ್ಗೆನಿಮ್ಮ ಅಭಿಪ್ರಾಯವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ದಯವಿಟ್ಟು ಅವರು ಅಭಿಯಾನವನ್ನು ಮಾಡಲಿ, ಆಮ್‌ ವೆಲ್ಕಂ ದಟ್‌.. ಕಾಂಗ್ರೆಸ್‌ ನವರು ತನ್ನ ತೆಕ್ಕೆಯಲ್ಲಿ ಬಹಳಷ್ಟು ಹಗರಣಗಳನ್ನು ಇಟ್ಟುಕೊಂಡಿಡು ಈ ರೀತಿಯ ಕೆಲಸಗಳನ್ನು ಮಾಡುತ್ತಿದೆ. ಪೇ ಸಿಎಂ ಎಂಬುದು ಒಂದು ಹಗರಣವೇ ? ಎಂದು ಪ್ರಶ್ನಿಸಿದ್ದಾರೆ.
ಇದೊಂದು ಕ್ಯಾಂಪೇನ್‌ ಅಷ್ಟೆ ಇಂದಿನ ಯುವ ಸಮೂಹದಲ್ಲಿ ಇಂತಹವುಗಳನ್ನು ಕ್ರಿಯೆಟ್‌ ಮಾಡುವುದು ಸಣ್ಣ ಸಣ್ಣ ಯುವಕರಿಗೂ ಕೂಡ  ಗೊತ್ತಿರುವಂತಹದ್ದೆ.ಇದೊಂದು ಮೋಸದ ಸುದ್ದಿ ಎಂಬುದು ಬಹಳ ಸ್ಪಷ್ಟವಾಗಿದೆ. ಕಾಂಗ್ರೆಸ್‌ ನವರು ತಮ್ಮ ಸ್ವಾರ್ಥ ಮತ್ತು ಅಧಿಕಾರಕ್ಕೆ ಬರುವುದಕ್ಕಾಗಿ ರಾಜ್ಯದ ಹೆಸರನ್ನೂ ಕೂಡ ಬಲಿ ಕೊಡಲು ತಯಾರಿದ್ದಾರೆ.
ಭಾರತ್‌ ಜೋಡೊ ಅಭಿಯಾನದ ಪ್ರಯುಕ್ತ ರಾಹುಲ್‌ ಗಾಂಧಿ ಅವರು ಜಿಲ್ಲೆಯ ಬರುತ್ತಿರುವುದರ ಬಗ್ಗೆ ನೀವೇನು ಹೇಳತ್ತೀರಾಎಂಬ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ಅವರು ರಾಹುಲ್‌ ಗಾಂಧಿ ಅವರು ಬರುತ್ತಿರುವ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲೆ ಆದರೆ ರಾಹುಲ್‌ ಗಾಂಧಿ ಅವರು ಯಾವ ಯಾವ ಕ್ಷೇತ್ರಗಳಿಗೆ ಭೇಟಿ ಮಾಡಿದ್ದಾರೆ ಅಲ್ಲೆಲ್ಲಾ ಬಿಜೆಪಿಯ ಕಮಲ ಅರಳಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ