ಹುಣಸೂರು : ತಾಲ್ಲೂಕಿನ ರಂಗಯ್ಯನ ಕೊಪ್ಪಲು ಗೇಟ್ ಬಳಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ, ದ್ವಿಚಕ್ರ ವಾಹನ ಸವಾರನ ಸ್ಥಿತಿ ಗಂಭೀರ. ಮೈಸೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿಗೆ ರಂಗಯ್ಯನಕೊಪ್ಪಲು ಕಡೆಯಿಂದ ವೇಗವಾಗಿ ಬಂದು ಹೆದ್ದಾರಿಗೆ ಮುನ್ನುಗಿದ ದ್ವಿಚಕ್ರ ವಾಹನ ಸವಾರ ಕಾರಿನ ಮೇಲೆ ಬಿದ್ದು ರಸ್ತೆ ಮಧ್ಯಕ್ಕೆ ಎಸೆಯಲ್ಪಟ್ಟಿದ್ದು, ಹೆಲ್ಮೆಟ್ ಧರಿಸಿಲ್ಲದ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಹಸ್ತವ್ಯಸ್ತವಾಯಿತು.