ಮೈಸೂರು: ನಗರದಲ್ಲಿ ನವಜಾತ ಶಿಶು ಶವ ಪತ್ತೆಯಾಗಿದ್ದು, ನರಸಿಂಹರಾಜ ಪೊಲೀಸರು ಕೆ.ಆರ್. ಆಸ್ಪತ್ರೆಯಲ್ಲಿ ಇರಿಸಿದ್ದಾರೆ.
ನಗರದ ಆರ್.ಎಸ್. ನಾಯ್ಡುನಗರದ ಚಾಮುಂಡೇಶ್ವರಿ ದೇವಾಲಯ ಬಳಿ ಮೋರಿಯೊಂದರ ಹತ್ತಿರ ಮಂಗಳವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ಜನಿಸಿ ಎರಡು ದಿನವಾಗಿದೆ ಎನ್ನಲಾದ ನವಜಾತ ಗಂಡು ಶಿಶು ಶವ ಪತ್ತೆಯಾಗಿದೆ. ಈ ಸಂಬಂಧ ನರಸಿಂಹರಾಜ ಠಾಣೆಯಲ್ಲಿ ಸೆಕ್ಷನ್ 318 ಅಡಿ ಪ್ರಕರಣ ದಾಖಲಾಗಿದೆ. ಯಾರು ತಂದು ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





