Mysore
18
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮುರುಘಾ ಮಠದಲ್ಲಿರುವ 22 ಮಕ್ಕಳ ಕುರಿತು ತನಿಖೆ

ಮೈಸೂರು : ಮಕ್ಕಳ ಆರೈಕೆ ಮತ್ತು ರಕ್ಷಣೆ (ಜುವೆನೈಲ್ ಜಸ್ಟೀಸ್) ಕಾಯ್ದೆ ೨೦೧೫ರ ಕನಿಷ್ಟ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿ ಮುರುಘಾ ಮಠವು ಆಶ್ರಯ ನೀಡಿರುವ ೨೨ ಮಕ್ಕಳ ಕುರಿತು ತನಿಖೆ ನಡೆಸಿ, ನಿರ್ದಿಷ್ಟ ಕ್ರಮ ಜರುಗಿಸುವಂತೆ ಚಿತ್ರದುರ್ಗ ಅಪರ ಜಿಲ್ಲಾಧಿಕಾರಿಯವರು ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚಿಸಿದ್ದಾರೆ.

ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರ ಮನವಿಯನ್ನು ಪರಿಗಣಿಸಿರುವ ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಈ ಸೂಚನೆ ನೀಡಿದ್ದಾರೆ. ಮುರುಘಾ ಮಠದಲ್ಲಿ ೨೨ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದು, ಈ ಪೈಕಿ ೭ ಮಕ್ಕಳು ದಾಖಲಾತಿ ಪಡೆದ ವರ್ಷದಲ್ಲಿ ೬ ವರ್ಷಗಳಿಂತ ಕಡಿಮೆ ವಯೋಮಾನದವರಾಗಿದ್ದಾರೆ. ಪ್ರಸ್ತುತ ೨೦೨೨ನೇ ವರ್ಷಕ್ಕೆ ೫ ಮಕ್ಕಳು ೧೮ ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದು, ಈ ಸಂಬಂಧ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ ೨೦೧೫ರ ಕನಿಷ್ಟ ಮಾರ್ಗಸೂಚಿ ಅನುಸರಿಸಿ ತನಿಖೆ ನಡೆಸುವಂತೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರು ನ.೨೫ರಂದು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಅರ್ಜಿ ಬರೆದಿದ್ದರು. ಇದನ್ನು ಪರಿಗಣಿಸಿರುವ ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾರ್ಗಸೂಚಿ ಅನ್ವಯ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!