Mysore
19
clear sky

Social Media

ಗುರುವಾರ, 15 ಜನವರಿ 2026
Light
Dark

ಮುರುಘಾ ಶ್ರೀ ವಿರುದ್ಧ ಪ್ರಗತಿಪರರ ಪ್ರತಿಭಟನಾ ಮೆರವಣಿಗೆ

ಮೈಸೂರು: ಮುರುಘಾ ಮಠದ ಶಿವಮೂರ್ತಿ ಶರಣರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸರ್ಕಾರ ಸ್ವಾಮೀಜಿಯ ಪರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ಪ್ರಗತಿಪರರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶುಕ್ರವಾರ ನಗರದ ನ್ಯಾಯಾಲಯದ ಮುಂಭಾಗ ಜಮಾವಣೆಗೊಂಡ ಪ್ರಗತಿಪರರು, ರೈತರು ಹಾಗೂ ಕನ್ನಡಪರ ಹೋರಾಟಗಾರರು, ಸ್ವಾಮೀಜಿಯನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡಬಾರದು ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮಕ್ಕಳ ಮೇಲಿನ ಪ್ರಕರಣದಲ್ಲಿ ಸ್ವಾಮೀಜಿಯನ್ನು ಆರೋಪಿಯನ್ನಾಗಿಸುವ ಬದಲು, ಇಂತಹ ಅನಾಗರೀಕ ಪ್ರಕರಣ ಬೆಳಕಿಗೆ ಬರಲು ಕಾರಣರಾದ ಒಡನಾಡಿ ಸೇವಾ ಸಂಸ್ಥೆಯ ಮೇಲೆ ಪೊಲೀಸರು ಸಂಶಯದಿಂದ ನೋಡುತ್ತಿರುವುದು ಅಮಾನವೀಯ ವರ್ತನೆ ಎಂದು ಹೇಳಿದರು.
ಮಕ್ಕಳ ಮೇಲೆ ಅತ್ಯಾಚಾಋವೆಸಗಿರುವ ಸ್ವಾಮೀಜಿಯ ಬಗ್ಗೆ ಮೃದು ಧೋರಣೆ ತೋರುತ್ತಿರುವ ಪೊಲೀಸರು, ಸಂತ್ರಸ್ತ ಮಕ್ಕಳ ಪೋಷಕರನ್ನು ವೇಶ್ಯಾವಾಟಿಕೆಗೆ ಪೂರೈಸುವ ಏಜೆಂಟರಂತೆ ಕಾಣುತ್ತಿರುವುದು ಪೊಲಿಸರ ಕರ್ತವ್ಯ ಮತ್ತು ವೃತ್ತಿ ಘನತೆಯನ್ನು ಸಮಾಜವು ಅನುಮಾನದಿಂದ ನೋಡುವಂತಾಗಿದೆ ಎಂದರು.
ಇವೆಲ್ಲಂಕಿಂತಲೂ ಘೋರವೆಂದರೆ, ಸಂತ್ರಸ್ಥೆಯ ತಾಯಿ ಹಾಗೂ ಮಕ್ಕಳಪರ ನಿಂತ ಆಡಳಿತಾಧಿಕಾರಿ ಬಸವರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ಇದು ಕಳವಳಕಾರಿಯಾದ ವಿಚಾರ ಎಂದು ಹೇಳಿದರು.
ನ್ಯಾಯಾಲಯದ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಆರ್‌ಟಿಒ ವೃತ್ತ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಮುಡಾ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂತ್ಯಗೊಂಡಿತು.
ಹಿರಿಯ ಸಮಾಜವಾದಿ ಪ.ಮಲ್ಲೇಶ್, ಉಗ್ರನರಸಿಂಹೇಗೌಡ, ಸಿ.ಬಸವಲಿಂಗಯ್ಯ, ಚಂದ್ರಶೇಖರ ಮೇಟಿ, ಎಸ್.ರಘು, ಸಂತೋಷ್ ಮುಂತಾದವರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!