ಮೈಸೂರು: ಮುರುಘ ಶ್ರೀ ಪ್ರಕರಣದಲ್ಲಿ ವಿಚಾರಣೆಗೆಂದು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದ ಸಂತ್ರಸ್ತ ಬಾಲಕಿಯರ ತಾಯಿಯನ್ನು ನ.೩೦ರಂದು ರಾತ್ರಿ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ನ.೩೦ರಂದು ಒಡನಾಡಿ ಸೇವಾ ಸಂಸ್ಥೆಯ ಮಡಿಲು ಪುರ್ನವಸತಿ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಮಫ್ತಿಯಲ್ಲಿ ನುಗ್ಗಿರುವ ೧೦ ಮಂದಿ ಚಿತ್ರದುರ್ಗದ ಪೊಲೀಸರು ಸಂಸ್ಥೆಯೊಳಗೆ ಹುಡುಕಾಟ ನಡೆಸಿದ್ದರು. ಆ ವೇಳೆ ಅವರನ್ನು ತಡೆದಿದ್ದ ಒಡನಾಡಿ ಸಂಸ್ಥೆಯ ನಿರ್ದೇಶಕರು, ‘ಬಾಲಕಿಯರ ತಾಯಿಯನ್ನು ವಿಚಾರಣೆ ಮಾಡಿ ಕಳುಹಿಸುತ್ತೇವೆ ಎಂದು ಕರೆದುಕೊಂಡು ಹೋದವರು ವಾಪಸ್ ಕರೆದುಕೊಂಡು ಬಂದಿಲ್ಲವೇಕೆ’ ಎಂದು ಪ್ರಶ್ನಿಸಿದ್ದರು. ಆನಂತರ ಪೊಲೀಸರು ತಪ್ಪೊಪ್ಪಿಕೊಂಡು ಅಲ್ಲಿಂದ ತೆರಳಿದ್ದರು. ಆ ನಂತರ ಅಂದು ರಾತ್ರಿಯೇ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದ ತಾಯಿಯನ್ನು ವಾಪಸ್ ಕಳುಹಿಸಿದ್ದಾರೆ. ಗುರುವಾರ ನಾವು ನೀಡಿದ ದೂರಿಗೆ ಇನ್ನೂ ಯಾರಿಂದಲು ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದರು.





