Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜ.10 ರಂದು ಮುಡಾ ಅದಾಲತ್

ಮೈಸೂರು: ಮೈಸೂರು ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಅವರ ನಿರ್ದೇಶನದಂತೆ ಮುಡಾ ವ್ಯಾಪ್ತಿಯಲ್ಲಿನ ನಾಗರಿಕರ ಸಮಸ್ಯೆಗಳು ಹಾಗೂ ಪರಿಹಾರದ ಹಿತದೃಷ್ಟಿಯಿಂದ ಪ್ರತಿ ತಿಂಗಳ ೨ನೇ ಹಾಗೂ ೪ನೇ ಮಂಗಳವಾರ ಮುಡಾ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೧೦ರಂದು ಮಧ್ಯಾಹ್ನ ೨ರಿಂದ ೪.೩೦ರವರೆಗೆ ಮೈಸೂರಿನ ನಾಗರಿಕರಿಗೆ ಪ್ರಾಧಿಕಾರವು ನೀಡುವ ಅನುಮೋದನೆ ಹಾಗೂ ಸೇವೆಗಳ ಕುರಿತಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ದೂರುಗಳಿದ್ದಲ್ಲಿ ಅವುಗಳನ್ನು ದಾಖಲಾತಿ ಸಮೇತ ನಿವೇದಿಸಲು ಅದಾಲತ್ ವೇದಿಕೆ ಕಲ್ಪಿಸುತ್ತದೆ. ಆದರೆ, ಹೊಸ ನಿವೇಶನಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಅಲ್ಲದೆ, ಅನುಮೋದನೆ ಬಾಕಿ ಇರುವುದು, ವಿಳಂಬ, ಹೊಸ ಸಮಸ್ಯೆಗಳ ಕುರಿತು ದಾಖಲಾತಿಯೊಂದಿಗೆ ಸಮಸ್ಯೆ ಇರುವ ಅರ್ಜಿದಾರರರು ಲಿಖಿತ ದೂರು ಸಲ್ಲಿಸಬಹುದಾಗಿದೆ.
ಅರ್ಜಿದಾರರು ಭೂ ಉಪಯೋಗ ಮಾಹಿತಿ, ಬದಲಾವಣೆ, ಭೂಸ್ವಾಧೀನ ಪರಿಹಾರ ಬಾಕಿ, ಅವಾರ್ಡ್, ನೋಟಿಫಿಕೇಷನ್ ನಕಲು, ಕಟ್ಟಡ ಪೂರ್ಣ ಮುಕ್ತಾಯ ವರದಿ, ಮನೆ-ನಿವೇಶನ ನೋಂದಣಿ-ವರ್ಗಾವಣೆ, ಪೌತಿ ವರ್ಗಾವಣೆ, ಮನೆ ಕಂದಾಯ ನಿಗದಿ, ಬದಲಿ ನಿವೇಶನ ಕೋರಿಕೆ, ಖಾತಾ ಕಂದಾಯ, ಮಂಜೂರಾತಿ ಪತ್ರ, ಸ್ವಾಧೀನ ಪತ್ರ, ದೃಢೀಕೃತ ನಕಲು ಕೋರಿಕೆ ಅರ್ಜಿ, ಕ್ರಯ ಪತ್ರ ಕೋರಿಕೆ ಅರ್ಜಿ ಹಾಗೂ ಇನ್ನಿತರೆ ಮುಡಾ ಪ್ರಕ್ರಿಯೆಗಳ ಕುರಿತಂತೆ ನಾಗರಿಕರು ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಮುಡಾ ಪ್ರಟಣೆಯಲ್ಲಿ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ