Mysore
18
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹಣ ದುರುಪಯೋಗ; ತಹಶೀಲ್ದಾರ್ ವಿರುದ್ದ ಕ್ರಮಕ್ಕೆ ಆಗ್ರಹ

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯದೆ ೪ ಕೋಟಿ ರೂ. ದುರುಪಯೋಗ ಮಾಡಿಕೊಂಡ ಅಂದಿನ ತಹಶೀಲ್ದಾರ್ ಕಾಮಾಕ್ಷಮ್ಮ ಅವರ ವಿರುದ್ದ ಕ್ರಮ ಕೈಗೊಳ್ಳದೆ ವಿಳಂಬ ಮಾಡಲಾಗುತ್ತಿದೆ ಎಂದು ಆರ್‌ಟಿಐ ಕಾರ್ಯಕರ್ತ ಆರ್.ಗೋವಿಂದರಾಜ್ ಆರೋಪಿಸಿದ್ದಾರೆ.

೨೦೧೬ ರಿಂದ ೨೦೧೭-೧೮ನೇ ಸಾಲಿನಲ್ಲಿ ಜಿಲ್ಲೆಯಲ್ಲೂ ಮಳೆಯಾಗದೆ ಬರ ಪರಿಸ್ಥಿತಿಯಿತ್ತು. ಆಗ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಗೋಶಾಲೆ ತೆರೆಯಲು, ಮೇವು ನಿಧಿ ಸ್ಥಾಪಿಸಲು ಮತ್ತು ಕುಡಿಯುವ ನೀರು ಪೂರೈಕೆ ರಾಜ್ಯ ಸರ್ಕಾರ ೪ ಕೋಟಿ ರೂ. ನೀಡಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಮಾಕ್ಷಮ್ಮ ಅವರು ಒಂದು ಗೋಶಾಲೆ ತೆರೆಯಲಿಲ್ಲ. ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ಬಗ್ಗೆ ೨೦೨೧ರ ನವೆಂಬರ್ ೩೦ ರಂದು ಸೂಕ್ತ ದಾಖಲೆಗಳ ಜೊತೆ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಲಾಗಿತ್ತು ಎಂದರು.
ಈ ಕುರಿತು ತನಿಖೆ ವಿಚಾರಣೆ ನಡೆಸಿದ ಉಪ  ವಿಭಾಗಾಧಿಕಾರಿಗಳು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಸಲ್ಲಿಸಿದ್ದರು. ಇಲ್ಲಿಯ ತನಕ ಯಾವುದೇ ಕ್ರಮ ವಹಿಸಿಲ್ಲ. ಈಗ ಕಾಮಾಕ್ಷಮ್ಮ ನಿವೃತ್ತರಾಗಿದ್ದಾರೆ. ಇನ್ನಾದರೂ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ದಸಂಸ ಮುಖಂಡರಾದ ಚಂದ್ರಶೇಖರ್, ಮಹೇಶ್, ಶ್ರೇಯಸ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!