Mysore
20
overcast clouds

Social Media

ಗುರುವಾರ, 01 ಜನವರಿ 2026
Light
Dark

ಅಕಾಲಿಕ ಮಳೆ ತಂದ ಸಂಕಷ್ಟ: ಆಗಿಲ್ಲ ನಷ್ಟದ ಅಂದಾಜು

ಮೈಸೂರು/ಮಡಿಕೇರಿ: ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಭಾರಿ ಮಳೆ ಹಾಗೂ ಕೊಯ್ಲಿನ ಸಂದರ್ಭದಲ್ಲಿ ಚಂಡಮಾರುತದಿಂದಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಹಾಗೂ ಕಾಫಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಕೊಡಗಿನಲ್ಲಂತೂ ಒಂದೆಡೆ ಕಾಡು ಪ್ರಾಣಿಗಳ ಹಾವಳಿ, ಇನ್ನೊಂದೆಡೆ ಅಕಾಲಿಕ ಮಳೆ ರೈತರನ್ನು ಚಿಂತೆಗೀಡು ವಾಡಿದೆ. ಈವರೆಗೂ ನಷ್ಟದ ಅಂದಾಜಿನ ಪ್ರಕ್ರಿಯೆ ಆರಂಭವಾದಂತೆ ಕಾಣುತ್ತಿಲ್ಲ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮೈಸೂರು ಜಿಲ್ಲೆಯಲ್ಲಿ ೧೦೨೬೫೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಗುರಿ ಮೀರಿ ೧೦೬೨೨೨ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿಗೆ ಜುಲೈ-ಆಗಸ್ಟ್ ತಿಂಗಳು ಪ್ರಶಸ್ತವಾದ ಸಮಯ. ಆದರೆ, ಆ ತಿಂಗಳುಗಳಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ, ರೈತರು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಭತ್ತ ನಾಟಿ ಮಾಡಿದ್ದಾರೆ. ಜೊತೆಗೆ ಭತ್ತ ಕೊಯ್ಲಿನ ಸಂದರ್ಭದಲ್ಲಿ ಕಳೆದ ವಾರ ಚಂಡಮಾರುತದಿಂದಾಗಿ ಅಕಾಲಿಕ ಮಳೆ ಸುರಿದ ಪರಿಣಾಮ ಗದ್ದೆಗಳಲ್ಲಿ ನೀರು ನಿಂತು ಭತ್ತ ನೆಲಕಚ್ಚಿದೆ. ಇದರಿಂದಾಗಿ ರೈತರಿಗೆ ಕೈಗೆ ಬಂದು ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಲ್ಕಾರು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಕಾರಣಕ್ಕೆ ಸಿಕ್ಕಷ್ಟು ಸಿಗಲಿ ಎಂದು ಭತ್ತ ಕಟಾವಿಗೆ ಮುಂದಾದರೆ ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಿದ್ದು, ಜಿಲ್ಲಾಡಳಿತ ಭತ್ತ ಕಟಾವು ಯಂತ್ರಗಳಿಗೆ ಬಾಡಿಗೆ ದರ ನಿಗದಿ ಮಾಡಿದ್ದರೂ ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಭತ್ತ ಕಟಾವು ಮಾಡಿಸಬೇಕಾಗಿ ಬಂದಿದೆ.

ಅದೇ ರೀತಿ ಕೊಡಗಿನಲ್ಲಿ ಜಿಲ್ಲೆಯಾದ್ಯಂತ ಕಳೆದ ವಾರ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಹಲವು ದಿನ ಮುಂದುವರೆದ ಪರಿಣಾಮ ಭತ್ತ ಹಾಗೂ ಕಾಫಿ ಬೆಳೆಗಾರರು ತೊಂದರೆಗೆ ಒಳಗಾಗಬೇಕಾಯಿತು. ಭತ್ತ ಹಾಗೂ ಕಾಫಿ ಫಸಲು ಒಂದೇ ಬಾರಿ ಕೊಯ್ಲಿಗೆ ಬಂದಿದ್ದು ರೈತರು ಆತಂಕದ ಪರಿಸ್ಥಿತಿುಂಲ್ಲಿದ್ದಾರೆ. ಕೊ್ಂಲುು ವಾಡಿದ ಹಣ್ಣನ್ನು ಪಲ್ಟಿಂಗ್ ವಾಡಿಸಿ ಮನೆುಂ ಅಂಗಳದ ಕಣದಲ್ಲಿ ಹಾಕಲಾಗಿದ್ದು,ಅಲ್ಲಿುೂಂ ಕಾಫಿ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಪಾರ್ಚ್‌ಮೆಂಟ್ ಕಾಫಿ ಒಣಗಿಸಲು ಹಲವು ದಿನಗಳು ಬೇಕು. ಆದರೆ, ಕಳೆದ ಒಂದು ವಾರದ ಹಿಂದೆ ಮೋಡದ ವಾತಾವರಣ ವಿದ್ದ ಹಿನ್ನೆಲೆಯಲ್ಲಿ ಕಾಫಿ ಬೀಜ ಬಣ್ಣ ಹಾಗೂ ಗುಣಮಟ್ಟ ಕಳೆದುಕೊಂಡಿರುವುದರಿಂದ ಬೆಳೆಗಾರರು ದೊಡ್ಡಮಟ್ಟದ ನಷ್ಟ ಅನುಭವಿಸುವಂತಾಗಿದೆ.


ಬೆಳೆ ನಷ್ಟ: ೧೧೩ ಕೋಟಿ ಜಮೆ

ಕೊಡಗು ಜಿಲ್ಲೆಯಲ್ಲಿ ಮೇ ಜೂನ್‌ನಲ್ಲಿ ಸುರಿದ ಮಳೆಯಿಂದ ಕೊಳೆರೋಗಕ್ಕೆ ತುತ್ತಾಗಿ ನೆಲ ಕಚ್ಚಿದ ಕಾಫಿ, ಮೆಣಸು, ಅಡಿಕೆ ಬೆಳೆಗಾರರಾದ ೩೯,೫೯೭ ರೈತರಿಗೆ ಸರ್ಕಾರದಿಂದ ಸುಮಾರು ರೂ ೧೧೩ ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ತಿಳಿಸಿದ್ದಾರೆ.


ತಾಲೂಕಿನಲ್ಲಿ ಅತಿ ಹೆಚ್ಚು ಅರೇಬಿಕಾ ಕಾಫಿ ಉತ್ಪಾದನೆಯಾಗುತ್ತಿದೆ. ಶೇ.೮೦ರಷ್ಟು ಬೆಳೆಗಾರರು ಮುಂಗಾರು ಮತ್ತು ಹಿಂಗಾರು ಮಳೆಯನ್ನೇ ನಂಬಿ ಕಾಫಿ ಕೃಷಿ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಪ್ರಸಕ್ತ ಮುಂಗಾರು ಧಾರಾಕಾರವಾಗಿ ಸುರಿದ ಪರಿಣಾಮ ಶೇ.೬೦ ರಷ್ಟು ಕಾಫಿ ಫಸಲಿಗೆ ಹಾನಿಯಾಗಿದೆ. ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

-ನವೀನ್ ಅಜ್ಜಳ್ಳಿ, ಕಾಫಿ ಬೆಳೆಗಾರರು, ಸೋಮವಾರಪೇಟೆ


ಸೈಕ್ಲೋನ್ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ನೆಲ ಕಚ್ಚಿದೆ. ಗದ್ದೆಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಬೆಲ್ಟ್ ಮಷಿನ್‌ನ ಮೂಲಕವೇ ಭತ್ತ ಕಟಾವು ಮಾಡಿಸಬೇಕಾಗಿದೆ. ಹೀಗಾಗಿ ಮಷಿನ್‌ನವರು ಕೇಳಿದಷ್ಟು ಹಣ ಕೊಟ್ಟು ಕಟಾವು ಮಾಡಿಸಬೇಕಾಗಿದೆ. ಅತಿಯಾದ ಮಳೆಯಿಂದ ಇಳುವರಿಯೂ ಕಡಿಮೆಯಾಗಿದೆ. ಈಗ ಬಿದ್ದ ಮಳೆಯಿಂದ ಗುಣಮಟ್ಟ ಕೂಡ ಹಾಳಾಗಿದೆ.

– ಸಿದ್ದೇಶ್, ಕುರುಬೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!