Mysore
32
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಚಾ.ನಗರ: ರಾಮನ ಹಾಡು ಹಾಡಿದ್ದಕ್ಕೆ ಕಾರ್ಯಕ್ರಮದಿಂದ ಹೊರನಡೆದ್ರಾ ಉಸ್ತುವಾರಿ ಸಚಿವ?

ನಿನ್ನೆ ( ಜನವರಿ 28 ) ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಗೀತೋತ್ಸವವನ್ನು ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿತ್ತು. ಈ ಸಂಗೀತ ಸಂಜೆಯಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ವೇದಿಕೆ ಪ್ರದರ್ಶನ ನೀಡಿದರು.

ತಮ್ಮ ಸಂಯೋಜನೆಯ ಸೂಪರ್‌ ಹಿಟ್‌ ಹಾಡು, ದರ್ಶನ್‌ ನಟನೆಯ ʼರಾಮ ನಾಮ ಹಾಡಿರೋ ರಾಮ ಬರುವನುʼ ಅನ್ನು ಅರ್ಜುನ್‌ ಜನ್ಯ ಹಾಡಲು ಶುರು ಮಾಡಿದರು. ಹೀಗೆ ಹಾಡು ಆರಂಭವಾಗುತ್ತಿದ್ದಂತೆ ಕಾರ್ಯಕ್ರಮದಿಂದ ಪಶುಪಾಲನೆ ಹಾಗೂ ರೇಷ್ಮೆ ಸಚಿವ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಸಚಿವರು ಹೀಗೆ ಕಾರ್ಯಕ್ರಮದಿಂದ ಹೊರನಡೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ರಾಮನ ಹಾಡು ಹಾಡಿದ್ದಕ್ಕೆ ಹೊರನಡೆದ್ರಾ ಎಂಬ ಪ್ರಶ್ನೆ ಹಾಗೂ ಆಕ್ರೋಶವನ್ನು ನೆಟ್ಟಿಗರು ಹೊರಹಾಕಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!