Mysore
19
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಟೆಕ್‌ ಕಾರಿಡಾರ್‌ನಲ್ಲಿ ಮೆಟ್ರೋ ಸವಾರಿ ಸಂಭ್ರಮ, ವೈಟ್‌ಫೀಲ್ಡ್‌- ಕೆ.ಆರ್‌.ಪುರ ಮಾರ್ಗದಲ್ಲಿ ಸಂಚಾರ ಶುರು

ಬೆಂಗಳೂರು: ವೈಟ್‌ಫೀಲ್ಡ್‌- ಕೆ.ಆರ್‌.ಪುರ ಮಧ್ಯೆ ‘ನಮ್ಮ ಮೆಟ್ರೋ’ ರೈಲಿನ ವಾಣಿಜ್ಯ ಸಂಚಾರವು ಭಾನುವಾರ ಆರಂಭವಾಗಿದ್ದು, ಈ ಭಾಗದ ಜನರು ಮೆಟ್ರೊದಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು.
ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ಸಂಚರಿಸಿತು. ಸಂಜೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ 16,319 ಜನರು ಪ್ರಯಾಣ ಮಾಡಿದ್ದಾರೆ. ಈ ಮಾರ್ಗದಲ್ಲಿಒಟ್ಟು 12 ನಿಲ್ದಾಣಗಳಿದ್ದು, 35 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ಈ ಮೆಟ್ರೊ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದರು. ಸೋಮವಾರದಿಂದ ಮುಂಜಾನೆ 5 ಗಂಟೆಯಿಂದ ರಾತ್ರಿ 11 ರವೆರೆಗೂ ಮೆಟ್ರೊ ರೈಲು ಸೇವೆ ದೊರೆಯಲಿದೆ. ಪ್ರಯಾಣಿಕರು ಟೋಕನ್‌, ಮೊಬೈಲ್‌ ಕ್ಯೂ ಆರ್‌ ಟಿಕೆಟ್‌, ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮಾರತ್‌ಹಳ್ಳಿ, ಕೆ.ಆರ್‌.ಪುರ, ಐಟಿಪಿಎಲ್‌ ಸುತ್ತಮುತ್ತಲ ಐಟಿ-ಬಿಟಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಮೆಟ್ರೊ ರೈಲು ಸೇವೆಯಿಂದ ತುಂಬಾ ಉಪಯೋಗವಾಗಲಿದೆ. ಮೆಟ್ರೊ ಸೇವೆಯಿಂದಾಗಿ ಸಂಚಾರ ದಟ್ಟಣೆ ತಗ್ಗಲಿದೆ.

ನಿತ್ಯ 1.5 ಲಕ್ಷ ಪ್ರಯಾಣಿಕರ ನಿರೀಕ್ಷೆ : 13.71 ಕಿ.ಮೀ ಉದ್ದದ ಈ ಮಾರ್ಗ ನಿರ್ಮಾಣಕ್ಕೆ 4500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೆಟ್ರೊದಲ್ಲಿ ವೈಟ್‌ಫೀಲ್ಡ್‌ನಿಂದ ಕೆ.ಆರ್‌.ಪುರ ತಲುಪಲು ಕೇವಲ 25 ನಿಮಿಷ ಸಾಕು. ಈ ಮಾರ್ಗದಲ್ಲಿ ನಿತ್ಯ 1.50 ಲಕ್ಷ ಮಂದಿ ಪ್ರಯಾಣಿಸುವ ನಿರೀಕ್ಷೆ ಇದೆ. ಪ್ರತಿ 12 ನಿಮಿಷಕ್ಕೊಂದು ರೈಲನ್ನು ಕಾರ್ಯಾಚರಣೆಗೊಳಿಸಲು ಬಿಎಂಆರ್‌ಸಿಎಲ್‌ ಸಜ್ಜಾಗಿದೆ. ಬಿಎಂಟಿಸಿಯು ಈ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 195 ಫೀಡರ್‌ ಬಸ್‌ಗಳನ್ನು ಓಡಿಸುತ್ತಿದೆ.
30 ರಿಂದ ಮೊಬಿಲಿಟಿ ಕಾರ್ಡ್‌ ಬಳಕೆ ಸಾಧ್ಯ : ನಮ್ಮ ಮೆಟ್ರೊದಲ್ಲಿ ಮಾ.30ರಿಂದ ಆರ್‌ಬಿಎಲ್‌ ಬ್ಯಾಂಕ್‌ ರುಪೇ ಎನ್‌ಸಿಎಂಸಿ (ನ್ಯಾಶನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌) ಬಳಕೆ ಸಾಧ್ಯವಾಗಲಿದೆ. ಮೆಟ್ರೊ ನಿಲ್ದಾಣ, ಆರ್‌ಬಿಎಲ್‌ ಬ್ಯಾಂಕ್‌ ಶಾಖೆಗಳಲ್ಲಿಈ ಕಾರ್ಡ್‌ ಲಭ್ಯವಿರಲಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!