Mysore
20
broken clouds

Social Media

ಸೋಮವಾರ, 26 ಜನವರಿ 2026
Light
Dark

ಚಾಕುವಿನಿಂದ ಇರಿದು ಯುವಕನ ಕೊಲೆ : ಆರೋಪಿಗಳು ಪರಾರಿ ; ಪತ್ತೆಗೆ ವಿಶೇಷ ತಂಡ

ಮಂಡ್ಯ : ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ದುಷ್ಕೃತ್ಯ ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿ – ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯಲ್ಲಿ ನಡೆದಿದೆ.

ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬವರ ಪುತ್ರ ಮೋಹನ್ ಕುಮಾರ್ (೨೪) ಕೊಲೆಯಾಗಿರುವ ಯುವಕ.

ಗುರುವಾರ ರಾತ್ರಿ ೧೦.೩೦ರ ಸಮಯದಲ್ಲಿ ಈತ ಅವ್ವೇರಹಳ್ಳಿ ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯ ಬಳಿ ಸತ್ತು ಬಿದ್ದಿದ್ದು, ಯಾರೋ ದುಷ್ಕರ್ಮಿಗಳು ಮುಖದ ಮೇಲೆಲ್ಲ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈತನ ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಮೃತನ ತಂದೆ ಮಹದೇವಸ್ವಾಮಿ ನೀಡಿದ ದೂರಿನ ಮೇರೆಗೆ ಬೆಳಕವಾಡಿ ಪಿಎಸ್‌ಐ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

Tags:
error: Content is protected !!