ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ ನಡೆದಿದೆ.
5 ಕಾಡಾನೆಗಳು ಕೆ.ಪಿ.ದೊಡ್ಡಿಯ ಮೂಲಕ ಗೊರವನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿವೆ. ಕೆ.ಪಿ.ದೊಡ್ಡಿ ಗ್ರಾಮದ ಸಿದ್ದರಾಜು ಎಂಬವರ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟು ಫಸಲನ್ನು ಸಂಪೂರ್ಣ ನಾಶಗೊಳಿಸಿವೆ.
ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ಸ್ಥಳಕ್ಕೆ ಧಾವಿಸಿ ಸಿದ್ದರಾಜು ಅವರ ಜಮೀನಿನಲ್ಲಿ ಬೀಡುಬಿಟ್ಟಿದ್ದ 5 ಕಾಡಾನೆಗಳನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಓಡಿಸಲು ಮುಂದಾದಾಗ ಅಣ್ಣೂರು, ಕಾರ್ಕಹಳ್ಳಿ, ಕ್ಯಾತಘಟ್ಟ ಮಾರ್ಗವಾಗಿ ಗೊರವನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಬೀಡುಬಿಟ್ಟಿವೆ.
ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಗ್ರಾಮಗಳಿಂದ ಕಾಡಿಗೆ ಓಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಸಿದ್ದರಾಜು ಅವರ ಜಮೀನಿನಲ್ಲಿ ಬೆಳೆ ಫಸಲು ನಾಶವಾಗಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.




