ಮಂಡ್ಯ: ಜಿಲ್ಲೆಯಲ್ಲಿ ಲಾಂಗು, ಮಚ್ಚು ಹಿಡಿದು ಅಪ್ರಾಪ್ತ ಬಾಲಕರು ಅಟ್ಟಹಾಸ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎದೆ ಝಲ್ಲೆನಿಸುವ ಘಟನೆ ನಡೆದಿದೆ.
ಹೌದು, ಯುವತಿ ಓರ್ವೋಳ ವಿಚಾರಕ್ಕಾಗಿ ಅಪ್ರಾಪ್ತ ಬಾಲಕರು ಯುವಕನೊಬ್ಬನನ್ನು ಮಂಡ್ಯದ ಹೊರವಲಯದ ಸ್ಮಶಾನಕ್ಕೆ ಕರೆ ತಂದು ಮಚ್ಚು, ಲಾಗು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿಉವ ಘಟನೆ ಬೆಳಕಿಗೆ ಬಂದಿದೆ.
ಇನ್ನು ಯುವಕನಿಗೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಫೇಸ್‌ಬುಕ್ ಲೈವ್‌ನಲ್ಲಿ ಬಿಟ್ಟಿದ್ದಾರೆ. ಅಲ್ಲದೇ ಆ ಯುವಕ ನಾನಿನ್ನು ಯಾವತ್ತು ಮಂಡ್ಯಕ್ಕೆ ಬರಲ್ಲ ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡರು ಬಿಡದೇ ಆತನ ಮೇಲೆ ಅಪ್ರಾಪ್ತ ಬಾಲಕರು ಹಲ್ಲೆ ನಡೆಸಿದ್ದಾರೆ.
ಸದ್ಯ ಈ ಪ್ರಕರಣ ಮಂಡ್ಯದ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದವರಿಗಾಗಿ ಹುಡಕಾಟ ಶೋಧ ನಡೆಸಿದ್ದಾರೆ.





