ಶ್ರೀರಂಗಪಟ್ಟಣ: ಪಟ್ಟಣದ ನ್ಯಾಯಾಲಯದ ಪಕ್ಕದಲ್ಲೇ ಇರುವ ಕ್ಯಾಂಟೀನ್‌ವೊಂದರಲ್ಲಿ ವ್ಯಕ್ತಿಯೊರ್ವ ಇಬ್ಬರಿಗೆ ಸ್ಕೂಡ್ರೈವರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಸಂಬಂಧ ಶ್ರೀರಂಗಟಪ್ಟಣ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದ ನಂಜಪ್ಪ ಎಂಬುವವನೇ ಹಲ್ಲೆ ನಡೆಸಿರುವ ಆರೋಪಿಯಾಗಿದ್ದು, ಮೈಸೂರಿನ ಕುಮಾರಸ್ವಾಮಿ ಮತ್ತು ನಂಜನಗೂಡಿನ ಬಿ.ಆರ್.ಉಮೇಶ್ ಎಂಬುವವರೇ ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ನಡೆಸಿ ಸತ್ಯಾಸತ್ಯತೆ ದಾಖಲಿಸಿಕೊಂಡಿದ್ದಾರೆ.





