Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಈಜಲು ತೆರಳಿದ್ದ ಇಬ್ಬರು ಬಾಲಕರು ಸಾವು

ಮದ್ದೂರು : ಮದ್ದೂರು ಕೆರೆಯ ಕೊಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ರಾಮ್ ರಹೀಂ ನಗರ ಬಡಾವಣೆಯ ನಿವಾಸಿ ಅಹಮ್ಮದ್ ಪಾಷಾ ಅವರ ಪುತ್ರ ಅಜ್ಮಾನ್ ಪಾಷಾ (16) ಹಾಗೂ ಈತನ ಸ್ನೇಹಿತ ರಾಮನಗರದ ಮಹಮ್ಮದ್ ಅಕ್ಮಲ್ ಅವರ ಪುತ್ರ ಮಹಮ್ಮದ್ ಅಲಿ (14) ಮೃತಪಟ್ಟ ಬಾಲಕರಾಗಿದ್ದಾರೆ.

ಅಜ್ಮಾನ್ ಪಾಷಾ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಬಾಲಕರು ಎಲ್‌ಐಸಿ ಬಡಾವಣೆಯ ಹಿಂಭಾಗದ ಕೊಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜಲು ಬಾರದೆ ಮೃತಪಟ್ಟಿದ್ದು, ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ ಬಳಿಕ ಶವಗಳನ್ನು ಮೇಲಕ್ಕೆ ತೆಗೆಯಲಾಗಿದೆ.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಬಾಲಕರ ಶವವನ್ನು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ