ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಜಲಾಶಯ ಭರ್ತಿಯ ಅಂಚಿನಲ್ಲಿರುವ ಹಿನ್ನೆಲೆ ಡ್ಯಾಂನಿಂದ ಕಾವೇರಿ ನದಿಗೆ ೧೦ ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ರಿಲೀಸ್ ಮಾಡಲಾಗಿದೆ.
ಜಲಾಶಯದ ೧೦ ಗೇಟ್ ಗಳ ಮೂಲಕ ೧೦ ಸಾವಿರ ಕ್ಯೂಸೆಕ್ ಅಧಿಕ ನೀರು ಹೊರಕ್ಕೆ ಬಿಡಲಾಗುತ್ತಿದೆ. ಡ್ಯಾಂನಿಂದ ನೀರು ಹಾಲ್ನೊರೆಯಂತೆ ರಭವಸವಾಗಿ ಬಂಡೆಗಳಿಗೆ ಅಪ್ಪಳಿಸಿಕೊಂಡು ಬರುತ್ತಿದ್ದು, ಕಾವೇರಿ ನದಿಗೆ ಜೀವಕಳೆ ಬಂದಿದೆ. ಪ್ರವಾಹ ಭೀತಿ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಮುಂದುವರೆದಿರುವ ಕಾರಣ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತಿದೆ. ಇನ್ನು ಸಂಜೆ ವೇಳೆಗೆ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.