Mysore
18
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ರಸಗೊಬ್ಬರ ದಾಸ್ತಾನು ಮಳಿಗೆಗೆ ತಹಸಿಲ್ದಾರ್ ದಿಢೀರ್‌ ಭೇಟಿ

fertilize black market

ಮದ್ದೂರು : ರಸಗೊಬ್ಬರ ದಾಸ್ತಾನು ಮಾಡಿರುವ ತಾಲ್ಲೂಕಿನ ವಿವಿಧ ಅಂಗಡಿ ಮಳಿಗೆಗಳಿಗೆ ತಹಸಿಲ್ದಾರ್ ದಿಢೀರ್ ಭೇಟಿ ನೀಡಿ ದರಪಟ್ಟಿ ಹಾಗೂ ರಸೀದಿ ಮತ್ತು ಇರುವ ಗೊಬ್ಬರಗಳನ್ನು ನೇರವಾಗಿ ರೈತರಿಗೆ ಮಾರಾಟ ಮಾಡಬೇಕು. ತಪ್ಪಿದಲ್ಲಿ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಟ್ರೇಡರ್ಸ್ ಮಾಲೀಕರಿಗೆ ತಹಸಿಲ್ದಾರ್ ಪರಶುರಾಮ್ ಸತ್ತಿಗೇರಿ ಎಚ್ಚರಿಕೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ದಾಸ್ತಾನು ಗೋಡೌನ್‌ಗೆ ಭೇಟಿ ನೀಡಿ ರಸಗೊಬ್ಬರಗಳ ಮಾಹಿತಿ ಪಡೆದು, ಸರಿಯಾದ ಚಿಲ್ಲರೆ ಹಾಗೂ ಸಗಟು ಮಾರಾಟದ ಮಾಹಿತಿ ಫಲಕವನ್ನು ಹಾಕದೇ ಇರುವುದಕ್ಕೆ ಕಾರ್ಯ ನಿರ್ವಹಣಾಧಿಕಾರಿಗೆ ನೋಟಿಸ್ ನೀಡುವಂತೆ ಆದೇಶಿಸಿದರು.

ನೇರವಾಗಿ ಟ್ರೇಡರ್ಸ್ ಹಾಗೂ ಸೊಸೈಟಿ ಮೂಲಕ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು, ಕಾಳ ಸಂತೆಯಲ್ಲಿ ಮಾರಾಟ ಆಗದ ಹಾಗೆ ಎಚ್ಚರವಹಿಸಬೇಕು, ರೈತರಿಗೆ ಯೂರಿಯ ಸಮಸ್ಯೆ ಎದುರಾಗಬಾರದು ಎಂದರು.ಪಟ್ಟಣದ ಕೋಡಿಲಿಂಗೇಶ್ವರ ಟ್ರೇಡರ್ಸ್ ಮಾರಾಟ ಮಳಿಗೆಗೆ ಭೇಟಿ ನೀಡಿ ಅಳತೆ ಸರಿ ಇಲ್ಲವೆಂಬುದನ್ನು ಪರಿಶೀಲಿಸಿದ ತಹಸಿಲ್ದಾರ್ ಅವರು, ಅಲ್ಲೇ ಇದ್ದಂತಹ ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಅವರಿಗೆ ಇವರ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ.ಪ್ರತಿಭಾ, ರಾಜಸ್ವ ನಿರೀಕ್ಷಕ ಮೋಹನ್, ಗ್ರಾಮಾಡಳಿತಾಧಿಕಾರಿ ಹರೀಶ್, ಷಣ್ಮುಖ ಉಪಸ್ಥಿತರಿದ್ದರು.

Tags:
error: Content is protected !!