Mysore
20
overcast clouds
Light
Dark

ಬೃಂದಾವನದಲ್ಲಿ ತಾಂತ್ರಿಕ ಸಮಸ್ಯೆ: ಪ್ರವಾಸಿಗರಿಂದ ಕೌಂಟರ್‌ ಸಿಬ್ಬಂದಿ ಮೇಲೆ ಹಲ್ಲೆ!

ಶ್ರೀರಂಗಪಟ್ಟಣ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಶನಿವಾರ ಸಂಜೆ ತಾಂತ್ರಿಕ ಕಾರಣದಿಂದ ಸಂಗೀತ ಕಾರಂಜಿ ಪ್ರಾರಂಭ ವಾಗುವುದು ತಡವಾದ ಕಾರಣ ಪ್ರವಾಸಿಗರ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ನ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸತತ ರಜಾ ಹಿನ್ನಲೆಯಲ್ಲಿ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು, ಶನಿವಾರ ಸಂಜೆ ಎಂದಿನಂತೆ ೬.೪೫ ಕ್ಕೆ ನೃತ್ಯ ಕಾರಂಜಿ ಪ್ರಾರಂಭವಾಗ ಬೇಕಾಗಿತ್ತು. ಸಂಗೀತಾ ಕಾರಂಜಿಯು ತಾಂತ್ರಿಕ ಕಾರಣದಿಂದ ಸುಮಾರು ೧ ಘಂಟೆಯಾದರೂ ಪ್ರಾರಂಭವಾಗದ ಕಾರಣ ರೊಚ್ಚಗೆದ್ದ ಪ್ರವಾಸಿಗರು, ನೃತ್ಯ ಕಾರಂಜಿ ಬಳಿ ಪ್ರವಾಸಿಗರು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಜೊತೆ ಜಗಳವಾಡಿ ನಂತರ ಪ್ರವೇಶ ಟೆಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ನೀಡಲು ನಿಯೋಜನೆಗೊಂಡಿರುವ ಕೆ.ಸಿ.ಐ.ಸಿ ಸಿಬ್ಬಂದಿಗಳ ಜೊತೆ ಜಗಳವಾಡಿ ನಂತರ ಆಕ್ರೋಷಗೊಂಡ ಪ್ರವಾಸಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿರುವ ಬಗ್ಗೆ ವರದಿಯಾಗಿದೆ.

ತಾಂತ್ರಿಕ ಕಾರಣದಿಂದ ನೃತ್ಯ ಕಾರಂಜಿ ತಡವಾಗಿದ್ದು, ನಮ್ಮ ಸಿಬ್ಬಂದಿಗಳು ಚುನಾವಣೆ ಕರ್ತವ್ಯ ಮುಗಿಸಿಕೊಂಡು ಕೂಡ ಬಂದಿದ್ದು, ಪ್ರವಾಸಿಗರು ಸಂಹವನ ಸಮಸ್ಯೆಯಿಂದ ಟೆಕೆಟ್ ಕೌಂಟರ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದು ಬೇಸರವಾಗಿದೆ, ಈ ಘಟನೆ ಕುರಿತು ನಮ್ಮ ಕಾ.ನೀ.ನಿಗಮ ಮತ್ತು ಕೆ.ಎಸ್.ಐ.ಎಸ್.ಎಫ್, ಹಾಗೂ ಟೆಕಟ್ ಕೌಂಟರ್ ನಿರ್ವಹಣೆ ಮಾಡುವ ಕೆ.ಸಿ.ಐ.ಸಿ ಕಂಪನಿ ಜೊತೆ ಸೊಮವಾರ ಸಭೆ ನಡೆಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ಕ್ರಮ ಜರುಗಿಸಲಾಗುತ್ತದೆ.
-ರಘುರಾಮ್, ಅಧೀಕ್ಷಕ ಅಭಿಯಂತರ , ಕಾವೇರಿ ನೀರಾವರಿ ನಿಗಮ, ಮಂಡ್ಯ