Mysore
16
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಥಾಯ್‌ ಮಾರ್ಷಲ್‌ ಆರ್ಟ್ಸ್‌ ಗೇಮ್ಸ್‌ನಲ್ಲಿ ಸೈಯದ್‌ ಸರ್ಫರಾಜ್‌ ಅಹ್ಮದ್‌ಗೆ ಚಿನ್ನದ ಪದಕ

Syed Sarfaraz Ahmad wins gold medal

ಮಂಡ್ಯ: ತೈಲ್ಯಾಂಡ್‌ನಲ್ಲಿ ಮೇ.೨೪ರಂದು ನಡೆದ ೭ ಅಂತರಾಷ್ಟ್ರೀಯ ಮತ್ತು ಥಾಯ್ ಮಾರ್ಷಲ್ ಆರ್ಟ್ಸ್ ಗೇಮ್ಸ್(ISಏಂ) ಕಿಕ್ ಬಾಕ್ಸಿಂಗ್‌ನಲ್ಲಿ ಮಂಡ್ಯದ ೯ ವರ್ಷದ ಸೈಯದ್ ಸರ್ಫ಼ರಾಜ್ ಅಹ್ಮದ್ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಬಾಲಕನ ಸಂಬಂಧಿ ಬಿಬಿ ಅಮೀನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಪಂದ್ಯಾವಳಿಯಲ್ಲಿ ಮಂಡ್ಯದ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನಗರದ ಮಹ್ಮದ್ ಮಕ್ಕಿ ಹಾಗೂ ಶೀಬಾರ ಪುತ್ರ ಸೈಯದ್ ಸರ್ಫ಼ರಾಜ್ ಅಹ್ಮದ್ ತನ್ನ ಪ್ರಪ್ರಥಮ ಅಂತರಾಷ್ಟ್ರೀಯ ಪದಕ ಗಳಿಸಿದ್ದಾರೆ ಎಂದರು.

ಸೈಯದ್ ಸರ್ಫ಼ರಾಜ್ ಅಹ್ಮದ್ ಮಂಡ್ಯದ ಶ್ರೀಚೈತನ್ಯ ಶಾಲೆಯ ವಿದ್ಯಾರ್ಥಿಯಾಗಿದ್ದು, ತಾನು ೩ ವರ್ಷದ ಬಾಲಕನಾಗಿದ್ದಾಗಿನಿಂದಲೂ ಸ್ಕೇಟಿಂಗ್ ಹಾಗೂ ಕಿಕ್‌ಬಾಕ್ಸಿಗ್ ತರಬೇತಿಯನ್ನು ಒಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಪಡೆಯುತ್ತಿದ್ದು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಪದಕಗಳನ್ನು ಗಳಿಸಿದ್ದಾರೆ ಎಂದು ಹೇಳಿದರು.

ಸ್ಕೇಟಿಂಗ್ ವಿಭಾಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ೩೫ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದು, ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ೨೫ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ತೊಡಗಿಸಿ, ಸಾಧನೆಗೆ ಸ್ಪೂರ್ತಿ ತುಂಬಬೇಕು ಎಂದ ಅವರು, ಸೈಯದ್ ಸರ್ಫ಼ರಾಜ್ ಅಹ್ಮದ್ ಒಲಂಪಿಕ್‌ನಲ್ಲಿಯೂ ಭಾಗವಹಿಸಿ, ಗೆಲ್ಲುವ ವಿಶ್ವಾಸವಿದೆ ಎಂದು ಉತ್ಸಾಹ ತೋರಿದರು.

ಗೋಷ್ಠಿಯಲ್ಲಿ ಚಿನ್ನದ ಪದಕ ವಿಜೇತ ಸೈಯದ್ ಸರ್ಫ಼ರಾಜ್ ಅಹ್ಮದ್, ತಾಯಿ ಶೀಬಾ ಇದ್ದರು.

Tags:
error: Content is protected !!