Mysore
19
overcast clouds
Light
Dark

ಮಂಡ್ಯ ವಿ.ವಿಯಲ್ಲಿ ಹೊಸ ಕೋರ್ಸ್ ಆರಂಭ: ತಜ್ಞರ ಸಮಿತಿ ರಚಿಸಲು ಸಲಹೆ

ಮಂಡ್ಯ: ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಆಧಾರಿತ ಹೊಸಹೊಸ ಕೋರ್ಸ್ ಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂದು ಮಂಡ್ಯ ವಿವಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆದ ವಿಧಾನ ಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.

ಅವರು ಶುಕ್ರವಾರ ನಡೆದ ವಿ.ವಿಯ ಆಡಳಿಯ ಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಶಿಕ್ಷಣಕ್ಕಷ್ಟೆ ಸೀಮಿತವಾದರೆ ವಿದ್ಯಾರ್ಥಿಗಳೂ ಆಸಕ್ತಿ ತೋರುವುದಿಲ್ಲ. ದಾಖಲಾತಿ ಕುಸಿದು ವಿವಿಗೂ ಹಿನ್ನಡೆ ಆಗಲಿದೆ. ಈಗಾಗಲೇ ಕೆಲವು ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನಾ ಚಟುವಟಿಕೆಗಳು ಕಷ್ಟ ಅನ್ನುವಂತಹ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಹೊಸದನ್ನು ಕಲಿಯಬೇಕು. ಕಲಿಕೆ ಅವರ ಬದುಕನ್ನು ಕಟ್ಟಿಕೊಳ್ಳುವಂತಿರಬೇಕು. ಹೊಸ ಕೋರ್ಸ್‌ಗಳ ಆರಂಭ ಆಗಬೇಕು. ಹಾಗಾಗಿ, ತಜ್ಞರ ಸಮಿತಿ ರಚಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.