ಮಂಡ್ಯ: ಶೀಘ್ರದಲ್ಲೇ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ʼನಾವು ನಿರೀಕ್ಷಿಸಿದ ಮಟ್ಟದಲ್ಲಿ ಮೇಲಿಂದ ನೀರು ಹರಿದು ಬರ್ತಿಲ್ಲ. ಭತ್ತ ನಾಟಿ ಮಾಡಲು ಜುಲೈ 15ರವರೆಗೂ ಸಮಯ ಇದೆ. ಹಾಗಾಗಿ ನಾವು ನಿರೀಕ್ಷೆ ಇಟ್ಟುಕೊಳ್ಳೋಣ. ಮಳೆ ಬಂದು ಡ್ಯಾಂ ನೀರಿನ ಮಟ್ಟ 110ಕ್ಕೆ ಏರಿದ್ರೆ ಸಮಸ್ಯೆ ಇರೋದಿಲ್ಲ. ಆದರೆ ಈಗ ರೈತರು ನೀರು ಕೇಳ್ತಿರೋದು ಕೆರೆ ಕಟ್ಟೆ ತುಂಬಿಸಿಕೊಳ್ಳಲು. ಹಾಗಾಗಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.





