Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕುಮಾರಸ್ವಾಮಿ ಸಾಚಾ ಅಲ್ಲ ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ: ಕದಲೂರು ಉದಯ್‌

kadaluru uday

ಮಂಡ್ಯ: ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ವಾದ ಪ್ರತಿವಾದಗಳು ನಡೆಯುತ್ತಿದ್ದು, ಸದ್ಯ ಮದ್ದೂರು ಕಾಂಗ್ರೆಸ್‌ ಶಾಸಕ ಕದಲೂರು ಉದಯ್‌ ಕುಮಾರಸ್ವಾಮಿ ವಿರುದ್ಧ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಕುಮಾರಸ್ವಾಮಿ ಏನೂ ಸಾಚಾ ಅಲ್ಲ, ರೇವಣ್ಣನಂತೆ ಕುಮಾರಸ್ವಾಮಿಯೂ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ. ಕುಮಾರಸ್ವಾಮಿ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೇವೆ. ರಾಧಿಕಾ ಅವರನ್ನು ಪತ್ನಿ ರೀತಿ ಕಾಣುತ್ತಿದ್ದಾರಾ? ಇಷ್ಟು ದಿನ ಯಾರೂ ದೂರು ಕೊಡಲು ಧೈರ್ಯ ಮಾಡಿರಲಿಲ್ಲ. ಪೆನ್‌ಡ್ರೈವ್‌ ಪ್ರಕರಣದ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡಲಿದೆ ಎಂದು ಕದಲೂರು ಉದಯ್‌ ಹೇಳಿದರು.

ಕುಮಾರಸ್ವಾಮಿ ಏನ್‌ ಸಾಚಾನಾ? ಮಗಳ ವಯಸ್ಸಿನವರನ್ನ ಪುಸಲಾಯಿಸಿ ಮಗು ಹುಟ್ಟಿಸಿ ರೋಡ್‌ಗೆ ಬಿಟ್ಟಿದ್ದಾರೆ. ಕುಮಾರಸ್ವಾಮಿ ನೀಚ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರಾ? ಜೀವನದುದ್ದಕ್ಕೂ ಬ್ಲಾಕ್‌ಮೇಲ್‌, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಬೇರೆಯವರನ್ನು ಮುಳುಗಿಸಿದ್ದೇ ಕುಮಾರಸ್ವಾಮಿ ಸಾಧನೆ. ಇವರ ಮನೆ ಹೆಣ್ಣು ಮಕ್ಕಳ ಮರ್ಯಾದೆ ರೋಡ್‌ನಲ್ಲಿ ಹರಾಜಾಗಿದ್ರೆ ಪ್ರತಿಭಟನೆ ಮಾಡ್ತಿದ್ರಾ? ಎಂದು ವಾಗ್ದಾಳಿ ನಡೆಸಿದರು.

ಅಲ್ಲದೇ ಪ್ರಜ್ವಲ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಬಗ್ಗೆಯೂ ಸಹ ಮಾತನಾಡಿದ ಉದಯ್‌ ಪ್ರಜ್ವಲ್‌ ವಿಡಿಯೊವನ್ನು ಸರ್ಕಾರ ಮಾಡಿಸಿತ್ತಾ? ಅವನೇ ವಿಡಿಯೊ ಮಾಡಿಕೊಂಡಿದ್ದ. ಪ್ರಜ್ವಲ್‌ ಜೆಡಿಎಸ್‌ ಸಂಸದ. ಜೆಡಿಎಸ್‌ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಇದು ಒಂದು ಕುಟುಂಬಕ್ಕೆ ಸೇರಿದ ವಿಚಾರ. ಈ ವಿಚಾರವಾಗಿ ಕುಮಾರಸ್ವಾಮಿ ಕ್ಷಮೆ ಕೇಳಬೇಕು. ಆದರೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿ ಉಪಮುಖ್ಯಮಂತ್ರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್‌ ಕಾರ್ಯಕರ್ತರು ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ, ಸಾಕಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಜೆಡಿಎಸ್‌ನ ನಾಯಕರು ಇದರ ಬಗ್ಗೆ ದನಿ ಎತ್ತಿಲ್ಲ. ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಇವರ ಮನೆ ಹೆಣ್ಣುಮಕ್ಕಳು ಆಗಿದ್ರೆ ಹೀಗೆ ಮಾಡುತ್ತಿದ್ರಾ? ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್‌ ಪ್ರತಿಭಟನೆ ಮಾಡುತ್ತಿದೆ? ಕಾಂಗ್ರೆಸ್‌ ಸರ್ಕಾರವನ್ನು ನೀಚ ಸರ್ಕಾರ ಅಂತಾರೆ. ಬಡವರಿಗೆ ಯೋಜನೆಗಳನ್ನು ಕೊಟ್ಟ ಸರ್ಕಾರ ನೀಚ ಸರ್ಕಾರನಾ? ಎಂದು ಹರಿಹಾಯ್ದರು.

Tags: