Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ರಸ್ತೆ ಅಪಘಾತ : ಇಬ್ಬರು ಯುವಕರು ದುರ್ಮರಣ

ಮದ್ದೂರು : ಟ್ರಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಮಾದರ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ನಗರ ಹೊರವಲಯದ ಎಸ್.ಡಿ.ಜಯರಾಮ್ ಬಡಾವಣೆಯ ನಿವಾಸಿಗಳಾದ ದಿಲೀಪ್ ಕುಮಾರ್ (22), ಶ್ರೀನಿವಾಸ್ (21) ಮೃತ ದುರ್ದೈವಿ ಗಳಾಗಿದ್ದಾರೆ. ಕೆಲಸಕ್ಕೆ ಹೋಗಿದ್ದ ಯುವಕರು ಕೆ.ಎಂ. ದೊಡ್ಡಿ ಕಡೆಯಿಂದ ಮಂಡ್ಯದ ಎಸ್. ಟಿ ಜಯರಾಮ್ ಬಡಾವಣೆಗೆ ಮರಳುತ್ತಿದ್ದಾಗ ತಡ ರಾತ್ರಿ ವೇಳೆ ಮಾದರಹಳ್ಳಿ ಗ್ರಾಮದ ಬಳಿ ಕಬ್ಬು ತುಂಬಿಕೊಂಡು ಟ್ರಾಕ್ಟರ್ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ತೆರಳುತ್ತಿತ್ತು, ಈ ವೇಳೆ ಬೈಕ್ ಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ದಿಲೀಪ್ ಕುಮಾರ್, ಶ್ರೀನಿವಾಸ್ ಸ್ಥಳದಲ್ಲಿ ಸಾವನಪ್ಪಿರುತ್ತಾರೆ.

ಸ್ಥಳಕ್ಕೆಭೇಟಿ ನೀಡಿದ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಕೆ. ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!