Mysore
25
haze

Social Media

ಗುರುವಾರ, 29 ಜನವರಿ 2026
Light
Dark

ಜಾತಿಗಣತಿ ವರದಿ ಜಾರಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚುತ್ತಿತ್ತು: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

yathindra siddaramaiah

ಮಂಡ್ಯ: ಜಾತಿಗಣತಿ ಅನುಷ್ಠಾನಕ್ಕೆ ಬರದಂತೆ ಪ್ರಬಲ ವರ್ಗದವರು ತಡೆದಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮಂಡ್ಯದಲ್ಲಿಂದು ಮಾತನಾಡಿದ ಅವರು, ಜಾತಿ ಗಣತಿ ವರದಿ ಜಾರಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚುತ್ತಿತ್ತು. ಆದರೆ ಕೆಲವರು ಇದಕ್ಕೆ ಪ್ರಬಲವಾಗಿ ವಿರೋಧ ಮಾಡಿದರು. ಪರಿಣಾಮ ಇದು ಅನುಷ್ಠಾನ ಆಗಲಿಲ್ಲ. ಜನಸಂಖ್ಯೆ ಹೆಸರಿನಲ್ಲಿ ಜಾತಿಗಣತಿ ಅನುಷ್ಠಾನಕ್ಕೆ ಬರದಂತೆ ಪ್ರಬಲ ವರ್ಗದವರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಜಾತಿಗಣತಿ ಜಾರಿಯಾಗಿದ್ದರೆ ಒಕ್ಕಲಿಗ ಲಿಂಗಾಯತರಿಗೂ ಮೀಸಲಾತಿ ಹೆಚ್ಚಳವಾಗುತ್ತಿತ್ತು. ಹಿಂದುಳಿದವರ ಮೀಸಲಾತಿ ಹೆಚ್ಚಿಸಬೇಕಾದರೆ ಅಡೆತಡೆ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!