ಮಂಡ್ಯ : ಮೈಸೂರು ಸ್ಯಾಂಡಲ್ ಸೋಪ್ ಗೆ ಪರಭಾಷೆ ನಟಿ ತಮ್ಮನ್ನ ಭಾಟಿಯ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವ ಸರ್ಕಾರದ ನಡೆ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆಯಿಂದ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ.
ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರದ ಬಳಿಯ ಬಯಲು ಪ್ರದೇಶಗಳಲ್ಲಿ ಎಮ್ಮೆ,ಹಸು ಹಾಗೂ ಕರುಗಳಿಗೆ ಮೈಸೂರು ಸ್ಯಾಂಡಲ್ ನಿಂದ ಸ್ನಾನ ಮಾಡಿಸಿ ವಿಡಂಬನೆ ಮಾಡಲಾಗಿದೆ.
ಜಾನುವಾರುಗಳಿಗೆ ಮೈಸೂರು ಸ್ಯಾಂಡಲ್ ಸೋಪ್ ನಲ್ಲಿ ಸ್ನಾನ ಮಾಡಿಸಿ ಪ್ರತಿಭಟನಾಕರಾರು ಆಕ್ರೋಶ ಹೊರ ಹಾಕಿದ್ದು, ರಾಜ್ಯದ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ಪರಭಾಷೆ ನಟಿಗೆ ಕೊಟ್ಟು ರಾಯಭಾರಿಯನ್ನಾಗಿ ಸರ್ಕಾರ ನೇಮಕ ಮಾಡಿ ರಾಜ್ಯದ ಪ್ರತಿಭಾವಂತರು, ಕಲಾವಿದರು ಹಾಗೂ ಯುವ ಪ್ರತಿಭೆಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಸರ್ಕಾರ ಈ ಕೂಡಲೇ ತಮ್ಮನ್ನಾ ಭಾಟಿಯರನ್ನು ರಾಯಭಾರಿಯಾಗಿ ನೇಮಕ ಮಾಡಿರುವುದನ್ನು ರದ್ದುಗೊಳಿಸಿ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪ್ತಿ ಮೈಸೂರು ಸ್ಯಾಂಡಲ್ ಸೋಪಿನಲ್ಲಿ ಜಾನುವಾರು ತೊಳೆಯುವ ಚಳುವಳಿ ವಿಸ್ತರಿಸುವ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಸೇರಿದಂತೆ ಇತರರು ಪಾಲ್ಗೊಂಡಿದ್ದರು.





