ಮಂಡ್ಯ: ಮಚ್ಚು ಹಿಡಿದು ಇದ್ರೆ ನೆಮ್ಮದಿಯಾಗ್ ಇರ್ಬೇಕು ಹಾಡಿಗೆ ರೀಲ್ಸ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಕಾರಸವಾಡಿ ಗ್ರಾಮದ ಯುವಕ ಪವನ್ ಎಂಬಾತನೇ ಮಚ್ಚು ಹಿಡಿದು ರೀಲ್ಸ್ ಮಾಡಿದ ಯುವಕನಾಗಿದ್ದಾನೆ.
ಆತನನ್ನು ಹಿಡಿದು ತಂಡ ಪೊಲೀಸರು ಠಾಣೆಯ ಮುಂದೆ ನಿಲ್ಲಿಸಿ ಕ್ಷಮೆ ಕೇಳಿಸಿದ್ದಾರೆ. ಜೊತೆಗೆ ಅದನ್ನು ವಿಡಿಯೋ ಮಾಡಿ ಟ್ರೋಲ್ ಮಾಡಿದ್ದಾರೆ.
ಇನ್ನು ಮಾರಕಾಸ್ತ್ರಗಳನ್ನು ಹಿಡಿದು ಪೋಸ್ ಕೊಡುವ ಪುಡಿರೌಡಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡುತ್ತಿದ್ದು, ಯುವಕನಿಗೆ ಚುರುಕು ಮುಟ್ಟಿಸಿದ್ದಾರೆ.




