ಪ್ಯಾರಿಸ್: ಇಲ್ಲಿ ಸೋಮವಾರ ನಡೆದ ಪ್ಯಾರ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್ 3ವಿಭಾಗದ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ಭಾರತದ ನಿತೇಶ್ ಕುಮಾರ್ ಬ್ರಿಟನ್‌ನ ಡೇನಿಯಲ್ ಬೆಥಾಲ್ ವಿರುದ್ಧ ಗೆದ್ದು ಚಿನ್ನದ ಪದಕ ಪಡೆದಿದ್ದಾರೆ.
ಬೆಥಾಲ್ ಅವರನ್ನು 21-14-18-23-21 ರಿಂದ ಕಠಿಣ ಪಂದ್ಯದಲ್ಲಿ ಸೋಲಿಸುವ ಮೂಲಕ ನೀತೇಶ್ ಚಿನ್ನದ ಪದಕ ಗೆದ್ದಿದ್ದಾರೆ.
2024ರ ಪ್ಯಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಒಳಗೊಂಡಿರುವ ಪ್ಯಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದು ಒಟ್ಟಾರೆ ಒಂಬತ್ತನೇ ಪದಕವಾಗಿದೆ.