ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ ಮುಂದುವರೆದಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯ ಭರ್ತಿಗೆ ಕೇವಲ ೮ ಅಡಿ ಮಾತ್ರ ಬಾಕಿ ಇದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆಆರ್ ಎಸ್ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇಂದು ಕೆ.ಆರ್ ಎಸ್ ಜಲಾಶಯಗೆ ೪೪೬೧೭ ಕ್ಯೂಸೆಕ್ ನೀರು ಬರುತ್ತಿದೆ. ೧೨೪.೮೦ ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂ ನಲ್ಲಿ ಸದ್ಯ ೧೧೬.೬೦ ಅಡಿ ಭರ್ತಿಯಾಗಿದೆ.
ಇನ್ನು ಜಲಾಶಯಲ್ಲಿ ೩೮೯೦೦ ಟಿಎಂಸಿ ನೀರು ಶೇಖರಣೆ ಆಗಿದ್ದು, ಇನ್ನೂ ೧೧ ಟಿಎಂಸಿ ನೀರು ಬಂದರೆ ೨೯.೪೫ ಟಿಎಂಸಿ ಶೇಖರಣೆ ಆಗಿ ಸಂಪೂರ್ಣ ಭರ್ತಿಯಾಗಲಿದೆ. ಇಂದು ಜಲಾಶಯದಿಂದ ೨೫೬೬ ಕ್ಯೂಸೆಕ್ ನೀರು ನಾಲೆ ಹಾಗೂ ಕುಡಿಯಲು ಬಿಡಲಾಗುತ್ತಿದೆ.





