Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ನಾಗಮಂಗಲ | ನಾಳೆ ʻಸಂಕ್ರಾಂತಿ ಸಂಭ್ರಮʼ

ನಾಗಮಂಗಲ: ಜನವರಿ 14, 2025 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ “ಸಂಕ್ರಾಂತಿ ಸಂಭ್ರಮ” ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಧ್ಯಾಹ್ನ 2:30ಕ್ಕೆ ಕೃಷಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ವಿವಿಧ ಧಾನ್ಯಗಳು, ಕೃಷಿ ಸಲಕರಣೆಗಳ ಪ್ರದರ್ಶನ, ಕಬಡ್ಡಿ ಮತ್ತು ಕುಸ್ತಿ ಪಂದ್ಯಾವಳಿಗಳು, ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ಕಡಲೆಕಾಯಿ ಪರಿಷೆ, ಅವರೆಕಾಯಿ ಪರಿಷೆ, ಬೆಲ್ಲದ ಪರಿಷೆ, ನಾಗಮಂಗಲ ಬೆಣ್ಣೆ ಪರಿಷೆಯ ಜೊತೆ ಕೃಷಿ ಇಲಾಖೆ ಮಳಿಗೆಗಳು ಮತ್ತು ಇಲಾಖಾ ಯೋಜನೆಗಳ ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಆಹಾರ ಮಳಿಗೆಯನ್ನು ಅಯೋಜಿಸಲಾಗಿದೆ.

ಸಂಜೆ 6:20ಕ್ಕೆ ಮಾನ್ಯ ಕೃಷಿ ಸಚಿವರಿಂದ ಗೋ ಪೂಜೆ ಮತ್ತು ಕಿಚ್ಚುಹಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹಾಗೆಯೇ, ಸಂಜೆ 6:30 ರಿಂದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರೊ. ಕೃಷ್ಣೇ ಗೌಡ ಅವರು ಹಾಗು ರಿಚರ್ಡ್ ಲೂಯಿಸ್ ತಂಡದಿಂದ “ನಗೆ ಸಂಕ್ರಾಂತಿ ಸಂಭ್ರಮ” ಕಾರ್ಯಕ್ರಮ ನಡೆಯಲಿದೆ.

ಸಂಜೆ 7:30 ರಿಂದ 9:30ರ ವರೆಗೆ ಸರ್ವರಿಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ನಾಮಮಂಗಲ ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಬೇಕಾಗಿ ಕೋರಿಕೆ.

Tags: