Mysore
21
overcast clouds
Light
Dark

ನಾಗಮಂಗಲ ಗಲಭೆಯಲ್ಲಿ ಕೋಟ್ಯಂತರ ರೂ. ನಷ್ಟ

೧.೪೭ ಕೋಟಿ ಮೌಲ್ಯದ ಕಟ್ಟಡಗಳು, ೧.೧೮ ಕೋಟಿ ರೂ. ವಸ್ತುಗಳು ಭಸ್ಮ

ಮಂಡ್ಯ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆಯಲ್ಲಿ ಕೋಟ್ಯಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ನೀಡಿರುವ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಎರಡೂ ಕೋಮಿಗೆ ಸೇರಿದ ಸುಮಾರು ೨೬ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಇದರಿಂದಾಗಿ ಹಲವಾರು ಮಂದಿಯ ಬದುಕು ಈಗ ಬೀದಿಗೆ ಬಿದ್ದಿದೆ. ಘಟನೆಯಲ್ಲಿ ಸುಮಾರು ೧.೪೭ ಕೋಟಿ ರೂ. ಮೌಲ್ಯದ ಕಟ್ಟಡಗಳು ಬೆಂಕಿಗಾಹುತಿಯಾಗಿದ್ದು, ೧.೧೮ ಕೋಟಿ ರೂ. ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಬೀದಿಗೆ ಬಿದ್ದ ಬದುಕು:
ಘಟನೆ ನಡೆದ ದಿನ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಾಕಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉದ್ಯಮಿಯೊಬ್ಬರು ಇತ್ತೀಚೆಗೆ ೩೦ ಲಕ್ಷ ರೂ. ಹೂಡಿಕೆ ಮಾಡಿ ಬಟ್ಟೆ ಖರೀದಿಸಿ ತಮ್ಮ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು.

ಈ ಅಂಗಡಿಯ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಕಬ್ಬಿಣದ ಹಾರೆಯಿಂದ ಒಡೆದು ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವುದನ್ನು ತೋರಿಸಿ ಅದನ್ನು ತಡೆಯುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಯುವಕರು ಮನವಿ ಮಾಡಿದರೂ ಸಹ ಇದಕ್ಕೂ ನಮಗೂ ಸಂಬAಧವೇ ಇಲ್ಲವೆಂಬAತೆ ಪೊಲೀಸರು ವರ್ತಿಸಿದ್ದು ನಾಗರಿಕರ ಟೀಕೆಗೂ ಒಳಗಾಗಿದೆ.

ಪಟ್ಟಣದಲ್ಲಿ ನಡೆದ ಘರ್ಷಣೆಯಿಂದಾಗಿ ಕೋಟ್ಯಂತರ ರೂ. ನಷ್ಟವುಂಟಾಗಿ ಹಲವರ ಬದುಕು ಬೀದಿಗೆ ಬಿದ್ದಿದೆ. ಘಟನೆಯಿಂದ ಹೆದರಿದ ತಾಲ್ಲೂಕಿನ ಬದ್ರಿಕೊಪ್ಪಲು ಗ್ರಾಮದ ಯುವಕರು ಗ್ರಾಮ ತೊರೆದಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇಷ್ಟಾದರೂ ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂಬುದಾಗಿ ಹೇಳಿಕೆ ನೀಡಿರುವುದು ಸಂತ್ರಸ್ತರನ್ನು ಕೆರಳಿಸಿದೆ.

ಪೊಲೀಸರ ವೈಫಲ್ಯ:
ಕಳೆದ ವರ್ಷದ ಗಣೇಶೋತ್ಸವ ವೇಳೆ ಇದೇ ಸ್ಥಳದಲ್ಲಿ ಸಣ್ಣ ಘಟನೆ ನಡೆದು ರಾಜೀ ಸಂಧಾನ ಮಾಡಿಸಲಾಗಿತ್ತು. ಆದರೂ ಸಹ ಎಚ್ಚೆತ್ತುಕೊಳ್ಳದ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಗಣೇಶ ವಿಸರ್ಜನೆ ವೇಳೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಲೇ ಇರಲಿಲ್ಲ. ಕೇರಳದವರ ಪಿತೂರಿಯಿಂದಾಗಿ ಈ ಘಟನೆ ನಡೆಯಲು ಮತ್ತೊಂದು ಕಾರಣವಾಗಿದ್ದರೂ, ಗುಪ್ತಚರ ಇಲಾಖೆಯ ದಿವ್ಯ ನಿರ್ಲಕ್ಷö್ಯವೂ ಇದಕ್ಕೆ ಸಾಕ್ಷಿಯಾಗಿದೆ.

ಪಿಎಫ್‌ಐ ಕೈವಾಡದ ಬಗ್ಗೆ ಮಾಹಿತಿ ಇಲ್ಲ
ನಾಗಮಂಗಲದಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೇರಳದ ನಂಟಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.


ಈ ಸಂಬAಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣದಕ್ಕೆ ಸಂಬAಧಿಸಿದAತೆ ೫೫ ಆರೋಪಿಗಳ ಬಂಧಿಸಿದ್ದೇವೆ. ಇದರಲ್ಲಿ ಇಬ್ಬರು ಆರೋಪಿಗಳಾದ ಕೇರಳದ ಮಲ್ಲಪುರಂ ಜಿಲ್ಲೆಯ ಯೂಸಫ್ ಹಾಗೂ ನಾಸಿರ್ ಅವರು ನಾಗಮಂಗಲದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದು, ಕಳೆದ ೧೮ ವರ್ಷಗಳಿಂದ ನಾಗಮಂಗಲದಲ್ಲಿ ವಾಸ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಘಟನೆಯಲ್ಲಿ ಅಕ್ರಮವಾಗಿ ಬಾಂಗ್ಲಾದೇಶದವರಿದ್ದರೆ ಪರಿಶೀಲನೆ ಮಾಡಲಾಗುವುದು. ನಮ್ಮ ಮಾಹಿತಿ ಪ್ರಕಾರ ಯಾರೂ ಇಲ್ಲ. ಅಕ್ರಮ ಚಟುವಟಿಕೆ ಇದ್ದರೆ ಗೊತ್ತಾಗುತ್ತಿತ್ತು. ಎಫ್‌ಐಆರ್ ಮಾಹಿತಿ ಪ್ರಕಾರ ೪.೫ ಕೋಟಿ ರೂ. ನಷ್ಟವಾಗಿದೆ.

ಘಟನೆಯಿಂದ ಕೆಲವು ಗ್ರಾಮದ ಯುವಕರು ಊರು ಬಿಟ್ಟಿದ್ದಾರೆ. ಅಮಾಯಕರಿಗೆ ತೊಂದರೆ ಕೊಡಲ್ಲ. ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿ ಭಾಗಿಯಾದವರನ್ನ ಮಾತ್ರ ಬಂಧಿಸಿದ್ದೇವೆ. ಸಿಸಿ ಟಿವಿ ದೃಶ್ಯ ಸಂಗ್ರಹಿಸಿ ಮಾಹಿತಿ ಕಲೆಹಾಕಲಾಗಿದೆ. ಪ್ರಕರಣಲ್ಲಿ ೧೦೦ಕ್ಕೂ ಹೆಚ್ಚು ಜನರನ್ನ ಗುರುತಿಸಲಾಗಿದೆ. ಅವರ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

ಅಮಾಯಕರಿಗೆ ಏನೂ ಮಾಡಲ್ಲ ಅವರು ಪಟ್ಟಣಕ್ಕೆ ಬರಬಹುದು. ಘಟನೆ ಹಿನ್ನೆಲೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲಾಗಿದ್ದು, ಬೇರೆ ಬೇರೆ ಜಿಲ್ಲೆಯಲ್ಲಿ ನಡೆದ ವಿಡಿಯೋ ಬಿಟ್ಟು ನಾಗಮಂಗಲ ಪ್ರಕರಣ ಅಂತ ಪೋಸ್ಟ್ ಹಾಕ್ತಿದ್ದಾರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.