Mysore
24
haze

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಶ್ರೀರಂಗಪಟ್ಟಣದಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ!

ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ ಹೊಬಳಿಯ ಪಾಲಹಳ್ಳಿ ಗ್ರಾಮದಲ್ಲಿ ಬೆಳಂಬೆಳಿಗ್ಗೆಯೇ ರೌಡಿ ಶೀಟರ್‌ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪ್ರಜ್ವಲ್.ಆ. ಪಾಪು(29) ಕೊಲೆಯಾದ ರೌಡಿಶೀಟರ್. ಇವನು ಪಾಲಹಳ್ಳಿ ಗ್ರಾಮದ ವಕೀಲ ನಾಗೇಂದ್ರ ಎಂಬುವರ ಮಗನಾಗಿದ್ದಾನೆ. ಪಾಲಹಳ್ಳಿ ಗ್ರಾಮದ ಬೇಕರಿ ಮುಂದೆ ಇಂದು ಬೆಳಿಗ್ಗೆ ನಿಂತಿದ್ದ ವೇಳೆ ಕೇರಳ ರಾಜ್ಯದ ನೋಂದಣಿ ಇರುವ ಬಿಳಿ ಇನೋವಾ ಕಾರಿನಲ್ಲಿ ಬಂದ ನಾಲ್ಕು ಜನ ಏಕಾಏಕಿ ಮಾರಕಾಸ್ತ್ರಗಳಿಂದ ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ದಾರೆ.

ಹಂತಕರಿಂದ ಪ್ರಜ್ವಲ್ ತಪ್ಪಿಸಿಕೊಳ್ಳಲು ಪ್ರತಯ್ನಿಸಿದರೂ ಸಾದ್ಯವಾಗಿಲ್ಲ. ತೀವ್ರ ರಕ್ತಸ್ರಾವದಿಂದ ಪ್ರಜ್ವಲ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಪ್ರಜ್ವಲ್‌ ಮೇಲಿನ ಹಲ್ಲೆ ಹಳೇ ದ್ವೇಷಕ್ಕೆ ಕಾರಣ ಎನ್ನಲಾಗಿದೆ.

ಘಟನೆ ಸ್ಥಳಕ್ಕೆ ಮಂಡ್ಯ ಎಸ್‌.ಪಿ ಯತೀಶ್, ಎ.ಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಮುರುಳಿ, ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್, ಎ ಮಲ್ಲೇಶ್ ಸ್ಥಳಕ್ಕೆ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!