ಪಾಂಡವಪುರ : ತಾಲ್ಲೂಕಿನ ಚಿನಕುರಳಿ ಗ್ರಾಮದಿಂದ ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿನಕುರಳಿ ಗ್ರಾಮದ ನಿವಾಸಿ ಚನ್ನಕೇಶವ ಎಂಬವರ ಪುತ್ರಿ ಗಿರಿಜಾ ತನ್ನ ಇಬ್ಬರು ಮಕ್ಕಳಾದ ಲಕ್ಷ್ಮಿ (6) ಹಾಗೂ ಅಭಿ (4) ಎಂಬ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ.
ನನ್ನ ಪುತ್ರಿ ಗಿರಿಜಾ ಅವರನ್ನು ಕೆ.ಆರ್.ಪೇಟೆ ತಾಲ್ಲೂಕಿನ ಚಟ್ಟನಗೆರೆ ಗ್ರಾಮದ ಗೋಪಾಲ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದೆ, ಹೀಗೆ ಮೂರು ವರ್ಷಗಳ ಹಿಂದೆ ಗೋಪಾಲ ಮೃತಪಟ್ಟಿದ್ದರು. ಜೂ.6ರಂದು ಎಂದಿನಂತೆ ನಾನು ಬೆಳಿಗ್ಗೆ 6 ಗಂಟೆಗೆ ನನ್ನ ಪತ್ನಿ ಸವಿತಾಳೊಂದಿಗೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗಿದ್ದೆವು. ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಕ್ಕಿಲ್ಲ. ಯಾರಿಗಾದರೂ ಇವರ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಮನವಿ ಮಾಡಿದ್ದಾರೆ.





