- ಮಂಡ್ಯ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ಅಪ್ಪು ಹಿರಿಯ ಸಹೋದರ ನಟ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು.
ನಿಮಿಷಾಂಭ ದೇವಿಗೆ ಶಿವರಾಜ್ ಕುಮಾರ್ ಕುಟುಂಬದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ ಕುಮಾರ್ ಕಾಲದಿಂದಲೂ ರಾಜ್ ಕುಟುಂಬದವರು ದೇವಿ ಭಕ್ತರಾಗಿದ್ದಾರೆ.
ರಾಜ್ ಕುಟುಂಬ ಹಾಗು ನಿಮಿಷಾಂಭ ದೇಗುಲದ ಬಾಂಧ್ಯವದ ಬಗ್ಗೆ ದೇಗುಲದ ಪುರೋಹಿತರು ತಿಳಿಸಿದರು. ಕಳೆದ ಎರಡ ದಿನದ ಹಿಂದೆ ಕೂಡ ಪುನೀತ್ ಪತ್ನಿ ಅಶ್ವಿನಿ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು.





