ಮಂಡ್ಯ: ಮೇಲುಕೋಟೆ ಚೆಲುವರಾಯಸ್ವಾಮಿ ದೇವಾಲಯದ ಪ್ರಥಮ ಸ್ಥಾನಿಕ ಕರಗಂ ನಾರಾಯಣ ಅಯ್ಯಂಗರ್ ಅವರು ಭಾನುವಾರ (ಜೂನ್. 16) ವಿಧಿವಶರಾಗಿದ್ದಾರೆ.
82 ವರ್ಷದ ಕರಗಂ ನಾರಾಯಣ ಅಯ್ಯಂಗರ್ ಅವರು ವಯೋಸಹಜದಿಂದಾಗಿ ಮರಣ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ದೇವಾಲಯದ ಬಾಗಿಲು ಮುಚ್ಚಿರಲಿದೆ. ಅತ್ಯಕ್ರಿಯೆ ಮುಗಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇವಾಲಯದ ಸಂಪ್ರದಾಯಗಳೊಂದಿಗೆ ಮೇಲುಕೋಟೆಯಲ್ಲಿ ಅಯ್ಯಂಗರ್ ಅವರ ಅಂತ್ಯಕ್ರಿಯೆ ನಡೆಯಲಿದೆ.