ಮಂಡ್ಯ/ ಮೇಲುಕೋಟೆ: ಇಲ್ಲಿನ ಕಜ್ಜಿ ಕೊಪ್ಪಲು ಗ್ರಾಮದಲ್ಲಿ ಮಣ್ಣು ಕುಸಿದು ಹಾಳಾಗಿದ್ದ ನಾಲೆಯ ದುರಸ್ತಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಭಾನುವಾರ(ಜು.14) ಗುದ್ದಲಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿದ ಸಚಿವ ಎನ್ ಚಲುವರಾಯಸ್ವಾಮಿ, ಮೇಲುಕೋಟೆಯ ಕಜ್ಜಿಕೊಪ್ಪಲು ಗ್ರಾಮದಲ್ಲಿ ಕಾಲುವೆ ಮಣ್ಣು ಕುಸಿದು, ಮುಂದೆ ನೀರು ಹೋಗಲು ಸಮಸ್ಯೆ ಆಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಾಲುವೆ ದುರಸ್ತಿಗೆ ಮನವಿ ಮಾಡಿದ್ರು, ಅದಕ್ಕಾಗಿ 20 ಕೋಟಿ ವೆಚ್ಚದಲ್ಲಿ ಕಾಲುವೆ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ. ಕಾಮಗಾರಿ ಬೇಗನೆ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಇದರಿಂದ ರೈತರಿಗೆ ನೀರು ಬೇಗ ತಲುತ್ತದೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ನ್ಯಾಷನಲ್ ಹೈವೇ ಕೆಲಸ ನೆಡೆಯುವಾಗ ಹೊಳಲು ಗ್ರಾಮದಿಂದ ದುದ್ದವರಗೆ ರಸ್ತೆ ತುಂಬಾ ಹಾಳಾಗಿದೆ. ಇದನ್ನ ಸರಿ ಪಡಿಸಲು ಗ್ರಾಮಸ್ಥರು ಮನವಿ ಮಾಡಿದ್ರು, ಅದರಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೊತೆ ರಸ್ತೆ ವೀಕ್ಷಣೆ ಮಾಡಿದ್ದೇನೆ. ಈ ಬಗ್ಗೆ ನ್ಯಾಷನಲ್ ಹೈವೇ ಪ್ರಾಧಿಕಾರದವರ ಬಳಿ ಮಾತನಾಡಿ, ರಿಪೋರ್ಟ್ ಕೇಳಿದ್ದೇನೆ. ಜತೆಗೆ ತಕ್ಷಣಕ್ಕೆ ಈ ರಸ್ತೆಯನ್ನು ತಾತ್ಕಾಲಿಕವಾಗಿ ಸರಿ ಮಾಡಲು ಕ್ರಮ ಕೈಗೊಳ್ಳಲು ಹೇಳಿದ್ದೇನ ಎಂದರು.