ಮದ್ದೂರು : ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದ ಮುಸುಕುಧಾರಿಯೊಬ್ಬ ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ.
ಮುಸುಕುಧಾರಿಯೊಬ್ಬ ಕದಲೂರು ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ದೇವಾಲಯದ ಸುತ್ತ ಗಮನಿಸಿದ್ದಾನೆ. ಆದರೆ, ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿದ್ದಾನೆ.
ಇದನ್ನೂ ಓದಿ:- ಸಾವಿನಲ್ಲೂ ರಾಜಕೀಯ ಮಾಡೊರು ಮೂರ್ಖರು : ಶಾಸಕ ಹರೀಶ್ ಗೌಡ
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ




