Mysore
20
overcast clouds
Light
Dark

ಅಧಿಕ ಇಳುವರಿ ಕೊಡುವ ಭತ್ತ ಬೆಳೆಯಲು ಮುಂದಾದ ಮಂಡ್ಯ ರೈತರು

ಮಂಡ್ಯ: ಕಡಿಮೆ ನೀರು, ಹೆಚ್ಚು ಇಳುವರಿ ಮತ್ತು ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಹೊಸ ಭತ್ತದ ತಳಿಗಳನ್ನು ಬೆಳೆಯಲು ಮಂಡ್ಯ ರೈತರು ಉತ್ಸುಕರಾಗಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಈ ಭತ್ತದ ತಳಿಯನ್ನು ಪರಿಚಯಿಸಿದ್ದು, ಈಗಾಗಲೇ ಮಂಡ್ಯ ಜಿಲ್ಲೆಯ ರೈತರನ್ನು ವಿವಿಧ ಸಭೆಗಳಿಗೆ ಆಹ್ವಾನಿಸಿದೆ.

ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ಭತ್ತದ ತಳಿ ಇದಾಗಿದ್ದು, ಈ ಬಾರಿ ಮಂಡ್ಯ ಜಿಲ್ಲೆಯ ರೈತರು ಹೊಸ ತಳಿ ಭತ್ತ ಬೆಳೆಯಲು ಭಾರೀ ಉತ್ಸುಕರಾಗಿದ್ದಾರೆ.

ಇನ್ನೂ ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ಕೆಆರ್‌ಎಸ್‌ ಜಲಾಶಯ ಕೂಡ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನಾಲೆಗಳಿಗೂ ಕೂಡ ಹೆಚ್ಚುವರಿಯಾಗಿ ನೀರನ್ನು ಬಿಡಲಾಗುತ್ತದೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ ರೈತರು ಅಧಿಕ ಇಳುವರಿ ಕೊಡುವ ಭತ್ತ ಬೆಳೆಯಲು ಅನುಕೂಲವಾಗುತ್ತದೆ.

ಈ ಹೊಸ ತಳಿ ಭತ್ತಗಳಿಂದ ರೈತರು ಉತ್ತಮ ಆದಾಯ ಗಳಿಸಲು ಅನುಕೂಲವಾಗಲಿದ್ದು, ಈ ಮೂಲಕ ಅನ್ನದಾತರ ಬದುಕು ಹಸನಾಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಡ್ಯ ಜಿಲ್ಲೆಯ ರೈತರ ಮೊಗದಲ್ಲಿ ಭಾರೀ ಮಂದಹಾಸ ಮನೆಮಾಡಿದೆ.